ದೇಶ

ಪಾಲಮೇಡು ಜಲ್ಲಿಕಟ್ಟು ಸ್ಪರ್ಧೆ: 9 ಹೋರಿ ತಡೆದು ಮುಂಚೂಣಿಯಲ್ಲಿದ್ದ ಯುವಕ ಸಾವು

Nagaraja AB

ಮಧುರೈ: ಪಾಲಮೇಡು ಜಲ್ಲಿಕಟ್ಟು ಸ್ಪರ್ಧೆ ವೇಳೆ ಅಖಾಡದಲ್ಲಿ ಗೂಳಿ ಪಳಗಿಸಲು ಯತ್ನಿಸಿದ 26 ವರ್ಷದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಚಿಕಿತ್ಸೆಗಾಗಿ ಮಧುರೈನ ಜಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯುವಕ ದುರ್ಮರಣ ಹೊಂದಿರುವುದಾಗಿ ತಿಳಿದುಬಂದಿದೆ. ಮಧ್ಯಾಹ್ನದ ವೇಳೆಗೆ, ಜಲ್ಲಿಕಟ್ಟು ಸ್ಪರ್ಧೆ ವೇಳೆ ಒಬ್ಬ ಪತ್ರಕರ್ತ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲೆಯಾದ್ಯಂತ ನೂರಾರು ಹೋರಿಗಳನ್ನು ವಾಡಿವಾಸಲ್ (ಪ್ರವೇಶ ಸ್ಥಳ) ಮೂಲಕ ಬಿಡಲಾಯಿತು. ಈ ವೇಳೆ  25-30 ಹೋರಿ ಪಳಗಿಸುವವರಿಗೆ ಅನುಮತಿ ನೀಡಲಾಯಿತು. ತದನಂತರ ನಾಲ್ಕನೇ ಸುತ್ತಿನ  ವೇಳೆಗೆ ಸುಮಾರು 400 ಹೋರಿಗಳನ್ನು ಬಿಡಲಾಯಿತು.

9 ಹೋರಿಗಳನ್ನು ತಡೆದು ಐದನೇ ಸುತ್ತಿನಲ್ಲಿ ಮುಂಚೂಣಿಯಲ್ಲಿದ್ದ 26 ವರ್ಷದ ಯುವಕ ಅರವಿಂದ್ ರಾಜ್ ಅವರ ಹೊಟ್ಟೆಗೆ ಗೂಳಿ ತಿವಿದು ನೆಲಕ್ಕೆ ಎಸೆದಿದೆ. ದಾಳಿ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಆತನ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮುಂದಿನ ತನಿಖೆಗಳು ನಡೆಯುತ್ತಿವೆ.

SCROLL FOR NEXT