ದೇಶ

ನವದೆಹಲಿ: ಬಲಪಂಥೀಯ ನಾಯಕರ ಹತ್ಯೆಗೆ ಶಂಕಿತ ಉಗ್ರರ ನೇಮಕ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿಯಲ್ಲಿ ಗುರುವಾರ ಬಂಧಿಸಲಾದ ಇಬ್ಬರು ಶಂಕಿತ ಉಗ್ರರನ್ನು  ಜನವರಿ 27 ಮತ್ತು ಜನವರಿ 31 ರಂದು ಬಲಪಂಥೀಯ ನಾಯಕರ ಹತ್ಯೆಗೆ ನಿಯೋಜಿಸಲಾಗಿತ್ತು ಎಂದು ದೆಹಲಿ ಪೊಲೀಸ್ ಮೂಲಗಳು ಸೋಮವಾರ ಹೇಳಿವೆ.

ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಅವರು ತಂಗಿದ್ದ ಜಹಾಂಗೀರ್‌ಪುರಿಯ ಭಾಲ್ಸ್ವಾ ಡೈರಿ ಪ್ರದೇಶದಲ್ಲಿನ ಮನೆಯಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈ ಹಿಂದೆ ದೆಹಲಿ ಪೊಲೀಸರು ಹೇಳಿದ್ದರು. ಬಂಧಿತರನ್ನು ಜಗ್ಜಿತ್ ಸಿಂಗ್ (29) ಮತ್ತು ನೌಶಾದ್ (56) ಎಂದು ಗುರುತಿಸಲಾಗಿದೆ.

ಶುಕ್ರವಾರ ಅವರನ್ನು ಪಾಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪಂಜಾಬ್ ಮತ್ತು ದೆಹಲಿಯ ಮೂವರು ಬಲಪಂಥೀಯ ನಾಯಕರು ಅವರ ಹಿಟ್ ಲಿಸ್ಟ್‌ನಲ್ಲಿದ್ದು, ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಶಂಕಿತರು, ಬಲಪಂಥೀಯ ನಾಯಕರ ಮೇಲೆ ನಿಗಾ ವಹಿಸಿದ್ದರು. ಮೂವರು ನಾಯಕರ ಹತ್ಯೆಗೆ ಕ್ರಮವಾಗಿ ರೂ. 50 ಲಕ್ಷ, 1 ಕೋಟಿ ಹಾಗೂ 1.5 ಕೋಟಿ ರೂ. ಹಣ ಸ್ವೀಕಾರದ ಶಂಕೆ ವ್ಯಕ್ತಪಡಿಸಲಾಗಿದೆ. ಹವಾಲಾ ಆಪರೇಟರ್ ಗಳಿಂದ ರೂ. 5 ಲಕ್ಷ ಹಣವನ್ನು ಟೋಕನ್ ಹಣವನ್ನಾಗಿ ಶಂಕಿತ ಉಗ್ರರು ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
 

SCROLL FOR NEXT