ದೇಶ

ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದಿಂದ ಅಕ್ಷಯ್ ಕುಮಾರ್, ಐಶ್ವರ್ಯ ರೈ ಬಳಕೆ: ರಾಹುಲ್ ಗಾಂಧಿ

Nagaraja AB

ಲಖನ್‌ಪುರ: ಕೇಂದ್ರ ಸರ್ಕಾರ ಜನರ ಗಮನ ಬೇರೆಡೆ ಸೆಳೆದು ಲೂಟಿ ಮಾಡುವ ಮೂಲಕ ಸಾಮೂಹಿಕ ಪಿಕ್ ಪಾಕೆಂಟಿಂಗ್ ನಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಭಾರತ್ ಜೋಡೋ ಯಾತ್ರೆ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರ ಪ್ರವೇಶಿಸಿದ ನಂತರ ಲಖನ್ ಪುರದಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ನಡೆದು ಸಾವಿರಾರು ಜನರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. 

ಬಿಜೆಪಿ ಮತ್ತು ಆರೆಸ್ಸೆಸ್ ಆಳವಾಗಿ ದ್ವೇಷವನ್ನು ಹರಡಿದೆ ಅಂತಾ ಮೊದಲು ಅಂದುಕೊಂಡಿದ್ದೆ. ಆದರೆ, ಅದು ಆಗಿಲ್ಲ. ಟಿವಿಯಲ್ಲಿ ಮಾತ್ರ ಮುಖ್ಯವಾಗಿ ಕಾಣುತ್ತಿದೆ ಎಂದ ರಾಹುಲ್ ಗಾಂಧಿ, ದ್ವೇಷ, ಹಿಂಸಾಚಾರ, ನಿರುದ್ಯೋಗ ಮತ್ತು ಬೆಲೆ ಏರಿಕೆ ದೇಶ ಎದುರಿಸುತ್ತಿರುವ ಮುಖ್ಯ ಸಮಸ್ಯೆಗಳೆಂದು ಪಟ್ಟಿ ಮಾಡಿದರು. ಅವುಗಳಿಗೆ ಒತ್ತು ನೀಡದ ಮಾಧ್ಯಮವನ್ನು ದೂಷಿಸಿದರು. 

ಮಾಧ್ಯಮಗಳು ಸರಿಯಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿಲ್ಲ ಕೇಂದ್ರ ಸರ್ಕಾರ  ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಾಲಿವುಡ್ ತಾರೆಗಳಾದ ಐಶ್ವರ್ಯಾ ರೈ ಮತ್ತು ಅಕ್ಷಯ್ ಕುಮಾರ್ ಅವರಂತಹವರನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಭಾರತ್ ಜೋಡೋ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ

SCROLL FOR NEXT