ಸಂಗ್ರಹ ಚಿತ್ರ 
ದೇಶ

ಪತ್ನಿ ಮೇಲೆ ಕೋಪ: ಬುದ್ದಿ ಕಲಿಸಲು 'ಅದನ್ನೇ' ಕತ್ತರಿಸಿಕೊಂಡ ಪತಿ!

ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮಾಧೇಪುರ(ಬಿಹಾರ): ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮುರಳಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪತ್ನಿ ತಿಳಿಸದೆ ತನ್ನ ತಾಯಿಯ ಮನೆಗೆ ಹೋಗಿದ್ದರಿಂದ ಕೋಪಗೊಂಡ 27 ವರ್ಷದ ಕೃಷ್ಣ ಬಸುಕಿ ಎಂಬಾತ ಖಾಸಗಿ ಅಂಗವನ್ನು ಕತ್ತರಿಸಿ ಕುಲದೇವತೆಗೆ ಅರ್ಪಿಸಿದ್ದಾನೆ. ಈ ಘಟನೆಯ ಬಳಿಕ ಕೃಷ್ಣನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ತನಗೆ ಹೇಳದೆ ತವರು ಮನೆಗೆ ಹೋಗಿರುವ ವಿಷಯ ಶುಕ್ರವಾರ ತಡರಾತ್ರಿ ಕೃಷ್ಣಾ ಬಸುಕಿಗೆ ತಿಳಿಯಿತು. ಇದರಿಂದ ಕೋಪಗೊಂಡ ಆತ ಹರಿತವಾದ ಆಯುಧದಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾನೆ. ಇದರ ನಂತರ, ಕತ್ತರಿಸಿದ ಖಾಸಗಿ ಭಾಗವನ್ನು ಸ್ವಂತ ಕುಲದೇವತೆಯ ಸ್ಥಳದಲ್ಲಿ ಅರ್ಪಿಸಿದ್ದಾನೆ.

ಕೃಷ್ಣ ಬಸುಕಿ ಪಂಜಾಬ್‌ನ ಮಂಡಿಯಲ್ಲಿ ನೆಲೆಸಿದ್ದು ಅಲ್ಲೇ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದನು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೃಷ್ಣಾಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಜನಿಸಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಮಗ ಜನಿಸಿದ್ದ. ಎರಡು ತಿಂಗಳ ಹಿಂದಷ್ಟೇ ಪಂಜಾಬ್ ನಿಂದ ಕೃಷ್ಣ ಬಾಸುಕಿ ಮನೆಗೆ ಬಂದಿದ್ದನು ಎನ್ನಲಾಗಿದೆ. 

ಮತ್ತೊಂದೆಡೆ, ಕೃಷ್ಣ ಬಸುಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜನ್ನಾಯಕ್ ಕರ್ಪೂರಿ ಠಾಕೂರ್ ವೈದ್ಯಕೀಯ ಕಾಲೇಜಿನ ವೈದ್ಯ ಡಾ.ಸಂತೋಷ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್