ನಟಿ ಜಾಕ್ವೆಲಿನ್, ನೋರಾ ಫತೇಹಿ 
ದೇಶ

ಜಾಕ್ವೆಲಿನ್ ಬಗ್ಗೆ ನೋರಾಗೆ ಯಾವಾಗಲೂ ಅಸೂಯೆಯಿತ್ತು: ವಂಚಕ ಸುಕೇಶ್ ಚಂದ್ರಶೇಖರ್

200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರ್ಥಿಕ ಅಪರಾಧ ವಿಭಾಗಗಳು ಪೊಲೀಸರು ಪೂರಕ ಆರೋಪಪಟ್ಟಿ ಸಲ್ಲಿಸಿರುವಂತೆಯೇ, ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಬಾಲಿವುಡ್ ನಟಿ ನೋರಾ ಫತೇಹಿಗೆ ಯಾವಾಗಲೂ ಅಸೂಯೆಯಿತ್ತು ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ಹೇಳಿದ್ದಾನೆ. 

ನವದೆಹಲಿ: 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರ್ಥಿಕ ಅಪರಾಧ ವಿಭಾಗಗಳು ಪೊಲೀಸರು ಪೂರಕ ಆರೋಪಪಟ್ಟಿ ಸಲ್ಲಿಸಿರುವಂತೆಯೇ, ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಬಾಲಿವುಡ್ ನಟಿ ನೋರಾ ಫತೇಹಿಗೆ ಯಾವಾಗಲೂ ಅಸೂಯೆಯಿತ್ತು ಎಂದು ಆರೋಪಿ ಸುಕೇಶ್ ಚಂದ್ರಶೇಖರ್ ಶನಿವಾರ ಹೇಳಿದ್ದಾನೆ. 

ಸುಕೇಶ್ ತನ್ನ ವಕೀಲರಾದ ಅನಂತ್ ಮಲಿಕ್ ಮತ್ತು ಎಕೆ ಸಿಂಗ್ ಮೂಲಕ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ನೋರಾ ಫತೇಹಿ ಯಾವಾಗಲೂ ಜಾಕ್ವೆಲಿನ್ ವಿರುದ್ಧ ಬ್ರೈನ್ ವಾಶ್ ಮಾಡುತ್ತಿದ್ದಳು ಹಾಗಾಗೀ ಜಾಕ್ವೆಲಿನ್ ಬಿಟ್ಟು, ತನ್ನೊಂದಿಗೆ ಡೇಟಿಂಗ್ ಆರಂಭಿಸಿದ್ದಳು ಎಂದು ಹೇಳಿದ್ದಾನೆ. 

ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನ್ನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಳು, ಕರೆಗೆ ಉತ್ತರಿಸದಿದ್ದರೂ  ಕರೆ ಮಾಡುತ್ತಲೇ ಇದ್ದಳು ಎಂದು ಸುಕೇಶ್ ಹೇಳಿಕೊಂಡಿದ್ದಾನೆ.

ಜಾಕ್ವೆಲಿನ್ ಜೊತೆಗೆ ಸಂಬಂಧದಲ್ಲಿದ್ದಾಗ, ನೋರಾಳನ್ನು ತಪ್ಪಿಸಲು ಪ್ರಾರಂಭಿಸಿದ್ದೆ. ಆದರೆ ಆಕೆ ಕರೆ ಮಾಡುವ ಮೂಲಕ ನನ್ನನ್ನು ಕೆರಳಿಸುತ್ತಿದ್ದಳು ಮತ್ತು ಸಂಗೀತ ನಿರ್ಮಾಣ ಕಂಪನಿ ಸ್ಥಾಪಿಸಲು ಬಾಬಿಗೆ (ನೋರಾ ಸಂಬಂಧಿ) ಸಹಾಯ ಮಾಡುವಂತೆ ಕೇಳಿಕೊಂಡಿದ್ದರಿಂದ ಅದನ್ನು ಮಾಡಿದ್ದೇನೆ. ಆಕೆ ಬಯಸಿದ ಹರ್ಮ್ಸ್ ಬ್ಯಾಗ್‌ಗಳು ಮತ್ತು ಅನೇಕ ಆಭರಣಗಳ ಚಿತ್ರಗಳನ್ನು ಅವಳಿಗೆ ನೀಡಿದ್ದೇನೆ. ಈ ಬ್ಯಾಗ್‌ಗಳು 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ್ದಾಗಿದೆ ಎಂದು ಸುಕೇಶ್ ತಿಳಿಸಿದ್ದಾನೆ.

ನೋರ್ ಫತೇಹಿ ಮೊದಲಿಗೆ ಇಡಿ ಮುಂದೆ ವಿಭಿನ್ನ ಹೇಳಿಕೆ ಹಾಗೂ ಸಾಕ್ಷ್ಯಾಧಾರ ನೀಡಿದ್ದಳು ತದನಂತರ ಇದೀಗ, ಮ್ಯಾಜಿಸ್ಟ್ರೇಟ್ ಮತ್ತು ಆರ್ಥಿಕ ಅಪರಾಧ ವಿಭಾಗಗಳ ಪೊಲೀಸರ ಮುಂದೆ ನೀಡಿರುವ ಹೇಳಿಕೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಆಕೆಯ ಹೊಸ ಕಥೆ ಕಟ್ಟಿದ್ದಾಳೆ. ಅದನ್ನು ಚೆನ್ನಾಗಿ ಪರಿಶೀಲಿಸಬಹುದು ಮತ್ತು ಇಡಿ ಚಾರ್ಜ್ ಶೀಟ್ ಮತ್ತು ಇದೀಗ ಆರ್ಥಿಕ ಅಪರಾಧ ವಿಭಾಗಗಳ ಪೊಲೀಸರ ಪೂರಕ ಆರೋಪ ಪಟ್ಟಿಯೊಂದಿಗೆ ಹೋಲಿಸಬಹುದಾಗಿದೆ ಎಂದು ಸುಕೇಶ್ ತಿಳಿಸಿದ್ದಾನೆ.  

ದೆಹಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಸಾಕ್ಷಿ ಎಂದು ಕರೆಯಲ್ಪಡುವ ನಟಿ ನೀಡಿರುವ ಹೇಳಿಕೆ, ಮಾಧ್ಯಮಗಳಲ್ಲಿ ಪ್ರಕಟವಾದ ಹೇಳಿಕೆಗಳನ್ನು ಓದಿದ ನಂತರ ಪ್ರತಿಯೊಬ್ಬರಿಗೂ ಖಾತ್ರಿಯಾಗಿದೆ. ಆದರೆ ಸಾಕ್ಷಿಧಾರರು ಎಂದು ಕರೆಯಲ್ಪಡುವ ನಟಿ ಹೇಗೆ ಸುಳ್ಳು ಹೇಳಿದ್ದಾರೆ ಮತ್ತು ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದನ್ನು ಹೇಳಿಕೆಯಲ್ಲಿ ತಿಳಿಸಿರುವುದಾಗಿ ಸುಕೇಶ್ ಹೇಳಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT