ದೇಶ

ದೆಹಲಿ: ಇಟ್ಟಿಗೆ ತುಂಬಿದ ಟ್ರಕ್ ಪಲ್ಟಿ, 60 ವರ್ಷದ ವೃದ್ಧ ಸಾವು, ಇಬ್ಬರಿಗೆ ಗಾಯ

Nagaraja AB

ನವದೆಹಲಿ: ಇಟ್ಟಿಗೆ ತುಂಬಿದ್ದ ಟ್ರಕ್‌ ಪಲ್ಟಿಯಾದ ಪರಿಣಾಮ 60 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ನವದೆಹಲಿಯ ಮಂಗೋಲ್ ಪುರಿ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.

ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಟ್ರಕ್  ತಿರುವಿನಲ್ಲಿ ರಸ್ತೆಯ ಒಂದು ಭಾಗಕ್ಕೆ ವಾಲಿದಾಗ ಪಲ್ಟಿಯಾಗಿದ್ದು, ಅದರಡಿ ಮೂವರು ಸಿಲುಕಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.  

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ, ಮಂಗೋಲ್‌ಪುರಿ ನಿವಾಸಿಗಳಾದ ಮಾಯಾ (60) ಮತ್ತು ಸುಖ್‌ಬೀರ್‌ ಸಿಂಗ್‌ (65) ಅವರ ಕಾಲಿಗೆ ಗಾಯಗಳಾಗಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಗಾಯಾಳುಗಳಿಗೆ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT