ಭರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ 
ದೇಶ

ಜಮ್ಮು-ಕಾಶ್ಮೀರ: ಬಾಂಬ್ ಸ್ಫೋಟ ಘಟನೆ ನಡುವೆ ಭದ್ರತೆಯೊಂದಿಗೆ ಭಾರತ್ ಜೋಡೋ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ 

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದ ಮರುದಿನ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ನಾಯಕ ಭಾರತ್ ಜೋಡೋ ಯಾತ್ರೆಯನ್ನು ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಹಿರನ್ ನಗರದಿಂದ ಪುನಾರಂಭ ಮಾಡಿದ್ದಾರೆ.

ಕತುವಾ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆದ ಮರುದಿನ ಬಿಗಿ ಭದ್ರತೆಯೊಂದಿಗೆ ಕಾಂಗ್ರೆಸ್ ನಾಯಕ ಭಾರತ್ ಜೋಡೋ ಯಾತ್ರೆಯನ್ನು ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಹಿರನ್ ನಗರದಿಂದ ಪುನಾರಂಭ ಮಾಡಿದ್ದಾರೆ.
 
ಜ.21 ರಂದು ಜಮ್ಮುವಿನಲ್ಲಿ ಅವಳಿ ಸ್ಫೋಟ ನಡೆದಿತ್ತು. ಒಂದು ದಿನದ ವಿರಾಮದ ನಂತರ ಭಾರತ್ ಜೋಡೋ ಯಾತ್ರೆ ಬೆಳಿಗ್ಗೆ 7 ಗಂಟೆಗೆ ಅಂತಾರಾಷ್ಟ್ರೀಯ ಗಡಿಯ ಬಳಿ ಇರುವ ಜಮ್ಮು-ಪಠಾಣ್ ಕೋಟ್ ಹೆದ್ದಾರಿಯಾದ್ಯಂತ ಇರುವ ಹಿರನ್ ನಗರ ಆರಂಭವಾಯಿತು. 

ರಾಹುಲ್ ಗಾಂಧಿಗೆ ಜಮ್ಮು-ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ವಿಕಾರ್ ರಸೂಲ್ ವನಿ, ಕಾರ್ಯಾಧ್ಯಕ್ಷ ರಮಣ್ ಭಲ್ಲಾ ಹಾಗೂ ಇನ್ನಿತರ ಸ್ವಯಂ ಸೇವಕರು ಭಾಗವಹಿಸಿದ್ದರು. 

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬೆಳಿಗ್ಗೆ 8 ರ ವೇಳೆಗೆ ಲೋಂದಿ ಚೆಕ್ ಪಾಯಿಂಟ್ ಗೆ ತಲುಪಿ ಸಾಂಬ ಜಿಲ್ಲೆಯ ತಪ್ಯಾಲ್-ಗಗ್ವಾಲ್ ಗೆ ಪ್ರವೇಶಿಸಿತು.

ಇಂದು ಸುಮಾರು 25 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ ಬಳಿಕ, ಯಾತ್ರೆ ಚಕ್ ನಾನಕ್ ನಲ್ಲಿ ರಾತ್ರಿ ವಿರಾಮ ಪಡೆದುಕೊಳ್ಳಲಿದ್ದು, ನಾಳೆ ಸಾಂಬದ ವಿಜಯಪುರದಿಂದ ಜಮ್ಮುವಿನತ್ತ ಸಾಗಲಿದೆ. 

ರಾಹುಲ್ ಗಾಂಧಿಗೆ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಇದಕ್ಕಾಗಿ ಪೊಲೀಸ್, ಸಿಆರ್ ಪಿಎಫ್ ಹಾಗೂ ಇತರ ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದ್ದು, ಭಾರತ್ ಜೋಡೋ ಯಾತ್ರೆ ಸುಗಮವಾಗಿ ಸಾಗುವುದನ್ನು ಭದ್ರತಾ ಸಿಬ್ಬಂದಿಗಳು ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶನಿವಾರದಂದು ಜಮ್ಮುವಿನ ಹೊರಭಾಗದಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿತ್ತು, 9 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 

ಜನವರಿ 30 ರಂದು ಶ್ರೀನಗರದಲ್ಲಿ ಭರತ್ ಜೋಡೋ ಯಾತ್ರೆ ಪೂರ್ಣಗೊಳ್ಳಲಿದ್ದು, ಅಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣದ ಮೂಲಕ ಯಾತ್ರೆ ಸಮಾರೋಪ ನಡೆಯಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT