ರಕ್ಷಣಾ ಸಿಬ್ಬಂದಿಯ ಚಿತ್ರ 
ದೇಶ

ಪುಣೆ: ನದಿಯಲ್ಲಿ ಒಂದೇ ಕುಟುಂಬದ 7 ಮಂದಿಯ ಮೃತದೇಹ ಪತ್ತೆ, ಸಾಮೂಹಿಕ ಆತ್ಮಹತ್ಯೆ ಶಂಕೆ

ಪುಣೆ ಜಿಲ್ಲೆಯ ದೌಂಡ್ ಪಟ್ಟಣದ ನದಿಯಿಂದ ಒಂದೇ ಕುಟುಂಬದ 7 ಸದಸ್ಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ.ಇದೊಂದು ಆಕಸ್ಮಿಕ ಸಾವು ಎಂದು ಪೊಲೀಸರು ವರದಿ ಮಾಡಿದ್ದಾರೆ.

ಪುಣೆ: ಪುಣೆ ಜಿಲ್ಲೆಯ ದೌಂಡ್ ಪಟ್ಟಣದ ನದಿಯಿಂದ ಒಂದೇ ಕುಟುಂಬದ 7 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದೊಂದು ಆಕಸ್ಮಿಕ ಸಾವು ಎಂದು ಪೊಲೀಸರು ವರದಿ ಮಾಡಿದ್ದಾರೆ.

ಎಲ್ಲಾ ಏಳು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಟುಂಬ ಸದಸ್ಯರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದರೂ, ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಲಾಗುತ್ತಿದೆ. ವಿವರವಾದ ತನಿಖೆ ನಡೆಸುವವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ಪುಣೆ ಗ್ರಾಮಾಂತರ ಪೊಲೀಸ್  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಜನವರಿ 18 ರಂದು ನದಿಯಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ನಂತರ ಸ್ಥಳೀಯ ಮುನ್ಸಿಪಲ್ ಕಾರ್ಪೋರೇಶನ್ ಜೊತೆಗೆ ಜಂಟಿ ಕಾರ್ಯಾಚರಣೆ ಆರಂಭಿಸಲಾಯಿತು. ಸೋಮವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದೆ. ಮೃತರ ಪೈಕಿ  ಒಬ್ಬರ ಜೇಬಿನಿಂದ ಮೊಬೈಲ್ ಫೋನ್ ಪತ್ತೆಯಾಗಿದೆ. ಇದರಿಂದ ಅವರು ಗುರುತು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮೂವರ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಎಲ್ಲಾ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಲೂಚಿಸ್ತಾನದಲ್ಲಿ ಉಗ್ರರ ವಿರುದ್ಧ ಭಾರಿ ಕಾರ್ಯಾಚರಣೆ: 145 ಭಯೋತ್ಪಾದಕರ ಹತ್ಯೆಗೈದಿದ್ದೇವೆಂದ ಪಾಕಿಸ್ತಾನ, ಭಾರತ-ಆಫ್ಘನ್ ವಿರುದ್ಧ ಗಂಭೀರ ಆರೋಪ

ಅಂಡಮಾನ್-ನಿಕೋಬಾರ್ ದ್ವೀಪ, ಕಾಶ್ಮೀರದಲ್ಲಿ ಅವಳಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಸಾವು ಪ್ರಕರಣ: SIT ತನಿಖೆ ಆರಂಭ

ಬೆಂಗಳೂರು: ಮೂರು ದಿನಗಳಿಂದ ಕಾಣೆಯಾಗಿದ್ದ ಬಾಲಕ BWSSB ಸಂಪ್ ನಲ್ಲಿ ಪತ್ತೆ!

9 ವರ್ಷಗಳ ಪ್ರೀತಿ ಮದುವೆಯಾದ ಎರಡೇ ತಿಂಗಳಿಗೆ ಅಂತ್ಯ: ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿ ಬಂಧನ!

SCROLL FOR NEXT