ದೇಶ

ಅಜ್ಮೀರ್ ದರ್ಗಾಗೆ ಚಾದರ್ ಅರ್ಪಿಸಿದ ಪ್ರಧಾನಿ ಮೋದಿ, ಗೆಹ್ಲೋಟ್

Srinivasamurthy VN

ನವದೆಹಲಿ: ಖ್ಯಾತ ಸೂಫಿ ಸಂತ ಖ್ವಾಜ ಮುಈನುದ್ದೀನ್‌ ಚಿಶ್ತಿ ಅವರ ಉರೂಸ್‌ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಅವರು ಬುಧವಾರ ಅಜ್ಮೀರ್‌ ದರ್ಗಾಕ್ಕೆ  ‘ಚಾದರ್‘ ಅರ್ಪಿಸಿದರು.

ಜಿಶ್ತಿ ಅವರ 811ನೇ ಉರೂಸ್‌ ಅಂಗವಾಗಿ ಪ್ರಪಂಚದಾದ್ಯಂತ ಇರುವ ಅವರ ಅನುಯಾಯಿಗಳಿಗೆ ಶುಭಕೋರಿದ ಪ್ರಧಾನಿ ಮೋದಿ, ದೇಶದ ಸಾಮರಸ್ಯ ಪರಂಪರೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ‘ದರ್ಶಿಗಳು, ಪೀರ್‌ಗಳು ಮತ್ತು ಫಕೀರರು ತಮ್ಮ ಶಾಂತಿ, ಸಹಬಾಳ್ವೆ, ಏಕತೆಯ ಸಂದೇಶದ ಮೂಲಕ ದೇಶದ ಸಾಂಸ್ಕೃತಿಕ ಬಂಧವನ್ನು ಗಟ್ಟಿಗೊಳಿಸಿದ್ದಾರೆ‘ ಎಂದು ಪ್ರಧಾನಿ ಅವರು ಕಳಿಸಿದ ಸಂದೇಶದಲ್ಲಿ ಹೇಳಿದ್ದಾರೆ.

ಖ್ವಾಜ ಮುಈನುದ್ದೀನ್‌ ಚಿಶ್ತಿ ಅವರು ಭಾರತ ಶ್ರೇಷ್ಠ ಧಾರ್ಮಿಕ ಪರಂಪರೆಯ ಗುರುತಾಗಿದ್ದಾರೆ. ಮಾನವ ಸಮೂಹಕ್ಕೆ ಅವರು ಮಾಡಿರುವ ಸೇವೆ ಮುಂದಿನ ಪೀಳಿಗೆಗೂ ಮಾದರಿಯಾದುದು ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಕೂಡ ಚಾದರ್ ಅರ್ಪಿಸಿದ್ದು, ಮಾಜಿ ಸಚಿವ ನಾಸಿರ್ ಅಖ್ತರ್‌ ಅವರು ಗೆಹ್ಲೋಟ್ ಪರವಾಗಿ ಚಾದರ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ.
 

SCROLL FOR NEXT