ಪ್ರತ್ಯಕ್ಷ ದೃಶ್ಯ 
ದೇಶ

ಹಸು ಉಳಿಸಲು ಸಿಂಹಿಣಿಯನ್ನು ಹೆದರಿಸಿ ಓಡಿಸಿದ ರೈತ, ವಿಡಿಯೋ ವೈರಲ್!

ಸಿಂಹಿಣಿಯು ರೈತನ ಹಸುವಿನ ಮೇಲೆ ದಾಳಿ ಮಾಡಿದ್ದು ಹಸುವನ್ನು ಉಳಿಸಿಕೊಳ್ಳಲು ರೈತ ಬಹಳ ಹತ್ತಿರ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಹಮದಾಬಾದ್: ಸಿಂಹಿಣಿಯು ರೈತನ ಹಸುವಿನ ಮೇಲೆ ದಾಳಿ ಮಾಡಿದ್ದು ಹಸುವನ್ನು ಉಳಿಸಿಕೊಳ್ಳಲು ರೈತ ಬಹಳ ಹತ್ತಿರ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಗುಜರಾತ್‌ನ ಜುನಾಗಢ್‌ನ ಕೇಶೋಡ್‌ನ ಕಾರ್ಪೊರೇಟರ್ ವಿವೇಕ್ ಕೊಟಾಡಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಸಿಂಹಿಣಿಯು ಹಸುವಿನ ಮೇಲೆ ದಾಳಿ ಮಾಡಿತ್ತು. ರೈತ ತನ್ನ ಹಸುವಿನ ಬಳಿಗೆ ಹೋಗಿ ಸಿಂಹಿಣಿಯನ್ನು ಹೆದರಿಸಿ ಓಡಿಸಲು ಪ್ರಯತ್ನಿಸುತ್ತಾನೆ. ಈ ಕ್ಲಿಪ್ ಅನ್ನು ದಾರಿಹೋಕರೊಬ್ಬರು ರೆಕಾರ್ಡ್ ಮಾಡಿದ್ದಾರೆ.

ವೀಡಿಯೋ ಕ್ಲಿಪ್‌ನ ಆರಂಭದಲ್ಲಿ ಸಿಂಹಿಣಿ ಹಸುವಿನ ಕುತ್ತಿಗೆಗೆ ಬಾಯಿ ಹಾಕಿ ಹಿಡಿದುಕೊಂಡಿರುವುದು ಕಂಡುಬರುತ್ತದೆ. ಸಿಂಹಿಣಿಯ ಹಿಡಿತದಿಂದ ಹೊರಬರಲು ಹಸು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು ಆದರೆ ಅದರ ಪ್ರಯತ್ನಗಳು ವಿಫಲವಾಗುತ್ತವೆ. ಹೋರಾಟದ ಸಮಯದಲ್ಲಿ, ಎರಡೂ ಪ್ರಾಣಿಗಳು ಸಹ ರಸ್ತೆಯ ಬದಿಗೆ ಹೋಗುತ್ತವೆ. ಇದೇ ವೇಳೆ ಹಸುವಿನ ಒಡೆಯನಾದ ರೈತ ನಿರ್ಭಯವಾಗಿ ಕೈ ಎತ್ತಿ ಸಿಂಹಿಣಿಯನ್ನು ಓಡಿಸಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ.

ರೈತ ಸಾಕಷ್ಟು ಪ್ರಯತ್ನ ಮಾಡಿದರೂ ಸಿಂಹಿಣಿಯು ಹಸುವಿನ ಕೊರಳನ್ನು ಬಿಡದಿದ್ದಾಗ, ರೈತನು ರಸ್ತೆಯ ಬದಿಯಲ್ಲಿ ಬಿದ್ದಿದ್ದ ದೊಡ್ಡ ಇಟ್ಟಿಗೆಯನ್ನು ಅದರ ಕಡೆಗೆ ವೇಗವಾಗಿ ಎಸೆಯುತ್ತಾನೆ. ಈ ಸಮಯದಲ್ಲಿ, ರೈತನು ಜೋರಾಗಿ ಕೂಗಿಕೊಂಡು ಸಿಂಹಿಣಿಯ ಬಳಿಕ ಬರುತ್ತಾನೆ. ಇದನ್ನು ಕಂಡ ಸಿಂಹಿಣಿ ಹಸುವಿನ ಕುತ್ತಿಗೆಯನ್ನು ಬಿಟ್ಟು ಓಡಿಹೋಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka Budget 2026 Live updates: ಸಿಎಂ ಸಿದ್ದರಾಮಯ್ಯರಿಂದ 4.48 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಕರ್ನಾಟಕ ಬಜೆಟ್ 2026: 'ಗೃಹಲಕ್ಷ್ಮಿ'ಯರಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ, 28 ಸಾವಿರ ಕೋಟಿ ಹಂಚಿಕೆ

ಕರ್ನಾಟಕ ಬಜೆಟ್ 2026: 'ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ': CM Siddaramaiah

ದೇಶದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ್ದು ವಜುಬಾಯಿ ವಾಲಾ: ಸಿಎಂ ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ ಗೊತ್ತೆ?

Karnataka Budget 2026: ಮೀನುಗಾರರಿಗೆ ಸಿಕ್ಕಿದ್ದೇನು?

SCROLL FOR NEXT