ಟೊಮೆಟೊ ಕಾಯಲು ಬೌನ್ಸರ್ ನಿಯೋಜನೆ 
ದೇಶ

ಟೊಮೆಟೊ ಕಾಯಲು ಬೌನ್ಸರ್ ನೇಮಿಸಿದ ವ್ಯಾಪಾರಿ! ಬಿಜೆಪಿ ಜೆಡ್ ಪ್ಲಸ್' ಭದ್ರತೆ ನೀಡಬೇಕು ಎಂದ ಅಖಿಲೇಶ್ ಯಾದವ್

ದೇಶಾದ್ಯಂತ ಟೊಮೊಟೊ ಬೆಲೆ ಗಗನಕ್ಕೇರಿದ್ದು, ಸೇಬಿಗಿಂತ ಬೆಲೆ ಹೆಚ್ಚಾಗಿರುವಂತೆಯೇ ಅವುಗಳನ್ನು ಗ್ರಾಹಕರು ದೋಚದಂತೆ ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.

ವಾರಣಾಸಿ: ದೇಶಾದ್ಯಂತ ಟೊಮೊಟೊ ಬೆಲೆ ಗಗನಕ್ಕೇರಿದ್ದು, ಸೇಬಿಗಿಂತ ಬೆಲೆ ಹೆಚ್ಚಾಗಿರುವಂತೆಯೇ ಅವುಗಳನ್ನು ಗ್ರಾಹಕರು ದೋಚದಂತೆ ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರರೊಬ್ಬರು ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.

ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಗಿರುವ ಅಜಯ್ ಫೌಜಿ ಈ ರೀತಿ ಬೌನ್ಸರ್ ನೇಮಿಸಿಕೊಂಡಿದ್ದಾರೆ. ಈ ಹಿಂದೆ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹುಟ್ಟುಹಬ್ಬದಂದು ಟೊಮೆಟೊ ಆಕಾರದ ಕೇಕ್ ಕತ್ತರಿಸುವ ಮೂಲಕ ಗಮನ ಸೆಳೆದಿದ್ದರು. 

ಈ ಕುರಿತು ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಫೌಜಿ, ಟೊಮೆಟೊ ದರದ ಬಗ್ಗೆ ಜನರಲ್ಲಿ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯಲ್ಲಿಯೂ ಜನರು ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ಇಂತಹ ವಾದಗಳನ್ನು ಕೊನೆಗೊಳಿಸಲು ಬೌನ್ಸರ್‌ಗಳನ್ನು ನಿಯೋಜಿಸಲು ನಿರ್ಧರಿಸಿದ್ದಾಗಿ ತಿಳಿಸಿದರು.

ಟೊಮೆಟೊವನ್ನು ಕೆಜಿಗೆ  140-160 ರೂ.ಗೆ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಅಂಗಡಿಯಲ್ಲಿ ಬೌನ್ಸರ್‌ಗಳನ್ನು ನಿಯೋಜಿಸಿದ್ದಾರೆ. ಆದರೆ, ಅವರನ್ನು ಎಷ್ಟು ಮೊತ್ತಕ್ಕೆ  ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. 

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಅವರ ಬೌನ್ಸರ್‌ಗಳಿಗೆ ಸಂಬಂಧಿಸಿದ ಸುದ್ದಿ ಕ್ಲಿಪ್‌ನ ಚಿತ್ರವನ್ನು ಹಂಚಿಕೊಂಡಿದ್ದು, "ಬಿಜೆಪಿ ಟೊಮೆಟೊಗಳಿಗೆ 'ಜೆಡ್-ಪ್ಲಸ್' ಭದ್ರತೆ ನೀಡಬೇಕು" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT