ಗಂಡ-ಹೆಂಡತಿ ಟೊಮೆಟೋ ಜಗಳ 
ದೇಶ

ಗಂಡ-ಹೆಂಡತಿ ಟೊಮೆಟೋ ಜಗಳ ಅರ್ಧ ಕೆಜಿ ಟೊಮೆಟೋದಿಂದ ಅಂತ್ಯ!

ಸಾಂಬಾರಿಗೆ 2 ಟೊಮೆಟೋ ಹಾಕಿದ್ದಕ್ಕೇ ಕೋಪಗೊಂಡು ಗಂಡನನ್ನು ಬಿಟ್ಟು ಮನೆ ಬಿಟ್ಟು ಹೋಗಿದ್ದ ಪತ್ನಿ ಕೊನೆಗೆ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿದ್ದಾರೆ.

ಭೋಪಾಲ್: ಸಾಂಬಾರಿಗೆ 2 ಟೊಮೆಟೋ ಹಾಕಿದ್ದಕ್ಕೇ ಕೋಪಗೊಂಡು ಗಂಡನನ್ನು ಬಿಟ್ಟು ಮನೆ ಬಿಟ್ಟು ಹೋಗಿದ್ದ ಪತ್ನಿ ಕೊನೆಗೆ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿದ್ದಾರೆ.

ಹೌದು.. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದ್ದ ಈ ಘಟನೆ ಪೊಲೀಸರ ಸಂಧಾನದಿಂದ ಸುಖಾಂತ್ಯ ಕಂಡಿದ್ದು, ಅರ್ಧ ಕೆಜಿ ಟೊಮೋಟೋ ಮೂಲಕ ಪತಿ-ಪತ್ನಿ ಇಬ್ಬರನ್ನೂ ಒಂದು ಗೂಡಿಸಿದ್ದಾರೆ. 

ಸದ್ಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇರುವ ಟೊಮೆಟೊವನ್ನು ತನ್ನನ್ನು ಕೇಳದೇ ಸಾಂಬಾರಿನಲ್ಲಿ ಬಳಸಿದಕ್ಕೆ ಗಂಡನ ಜೊತೆ ಜಗಳವಾಡಿದ ಹೆಂಡತಿ ಕೊನೆಗೆ ಮನೆಯನ್ನೇ ತೊರೆದು ಕಾಣೆಯಾಗಿರುವ ಘಟನೆ ನಡೆದಿತ್ತು. ಮೂಲಗಳ ಪ್ರಕಾರ ಸಂಜೀವ್‌ ಬರ್ಮನ್‌ ದಂಪತಿ ಶಾಹದೋಲ್‌ನಲ್ಲಿ ಸಣ್ಣ ಹೋಟೆಲ್‌ವೊಂದನ್ನು ನಡೆಸುತ್ತಿದ್ದಾರೆ. ಟೊಮೆಟೊ ತರಕಾರಿಗಳ ಬೆಲೆ ಏರಿಕೆಯಿಂದ ಪರಿಸ್ಥಿತಿಗೆ ತಕ್ಕಂತೆ ಖಾದ್ಯಗಳನ್ನು ತಯಾರಿಸುತ್ತಿದ್ದರು. ಆದರೆ ಸಂಜೀವ್‌ ಬರ್ಮನ್‌ ಇತ್ತೀಚೆಗೆ ಅಡುಗೆ ಮಾಡುವಾಗ ಹೆಂಡತಿಯನ್ನು ಕೇಳದೇ ಎರಡೇ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಪತ್ನಿ ಪತಿಯೊಂದಿಗೆ ಜಗಳ ತೆಗೆದಿದ್ದಾರೆ.

ಸಂಜೀವ್‌ ಹೇಳದೇ ಕೇಳದೆ ಎರಡು ಟೊಮೆಟೊ ಹಣ್ಣುಗಳನ್ನು ಬಳಸಿ ಸಾಂಬಾರು ತಯಾರಿಸಿದ್ದನ್ನು ಕಂಡು ಕೋಪಗೊಂಡ ಪತ್ನಿ ಜಗಳ ಆರಂಭಿಸಿದ್ದಾಳೆ. ಟೊಮೆಟೊದಿಂದ ಆರಂಭವಾದ ಸಣ್ಣ ಜಗಳ ಅತಿರೇಕಕ್ಕೆ ಹೋಗಿದ್ದು, ಕೊನೆಗೆ ಸಂಜೀವ್‌ ಬರ್ಮನ್‌ ಪತ್ನಿ, ಮಗುವಿನ ಜೊತೆ ಮನೆ ಬಿಟ್ಟು ಹೋಗಿದ್ದಾಳೆ. ಈ ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿಯನ್ನು ಸಂಜೀವ್‌ ಬರ್ಮನ್‌ ಹುಡುಕಿದ್ದಾರೆ. ಆದರೆ ಆಕೆ ಎಲ್ಲಿಯೂ ಪತ್ತೆಯಾಗದ ಕಾರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

ಇದೀಗ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಶೋಧ ನಡೆಸಿ ಕೊನೆಗೆ ಆಕೆಯ ಸಹೋದರಿ ಮೂಲಕ ಆಕೆಯನ್ನು ಸಂಪರ್ಕಿಸಿ ಧನಪುರಿ ಪೊಲೀಸ್ ಠಾಣೆಗೆ ಕರೆಸಿ ಸಂಧಾನ ನಡೆಸಿದ್ದಾರೆ. ಈ ವೇಳೆ ಪತಿ ಅರ್ಧಕೆಜಿ ಟೊಮೆಟೋವನ್ನು ಪತ್ನಿಗೆ ನೀಡಿ ಮುಂದೆ ಇಂತಹ ತಪ್ಪುಗಳಾಗುವುದಿಲ್ಲ ಎಂದು ಕೇಳಿಕೊಂಡ ಬಳಿಕ ಮತ್ತೆ ಮನೆಗೆ ಬರಲು ಪತ್ನಿ ಒಪ್ಪಿಕೊಂಡಿದ್ದಾರೆ. ಪತಿ ಕೂಡ ಟೊಮೆಟೋ ಬೆಲೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಯಾವುದೇ ಅಡುಗೆಯಲ್ಲಿ ಟೊಮೆಟೊಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಮನಗೆ ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT