ದೇಶ

ಯಮುನಾ ನೀರಿನ ಮಟ್ಟ ಏರುತ್ತಿದೆ, ಆದರೆ ದೆಹಲಿ ಜನರಿಗೆ ಅಪಾಯವಿಲ್ಲ: ಸಚಿವೆ ಅತಿಶಿ

Lingaraj Badiger

ನವದೆಹಲಿ: ಯಮುನಾ ನದಿಯ ನೀರಿನ ಮಟ್ಟವು ಮತ್ತೆ ಹೆಚ್ಚಾಗುವ ಸೂಚನೆ ತೋರಿಸುತ್ತಿರುವುದರಿಂದ ಜನ ಕಾಳಜಿ ಕೇಂದ್ರಗಳಲ್ಲೇ ಉಳಿಯಬೇಕು ಎಂದು ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಅವರು ಸೋಮವಾರ ಮನವಿ ಮಾಡಿದ್ದಾರೆ.

ಹರಿಯಾಣದ ಕೆಲವು ಪ್ರದೇಶಗಳಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಏರಿದೆ ಎಂದು ಅವರು ತಿಳಿಸಿದ್ದಾರೆ.

"ಯಮುನಾ ನದಿ ನೀರಿನ ಮಟ್ಟವು ರಾತ್ರೋರಾತ್ರಿ 206.1 ಮೀಟರ್ ಗೆ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಅಂದಾಜಿಸಿದೆ. ಆದರೆ ಇದರಿಂದ ದೆಹಲಿಯ ಜನರಿಗೆ ಯಾವುದೇ ಅಪಾಯವಿಲ್ಲ. ಆದರೂ ಕಾಳಜಿ ಕೇಂದ್ರಗಳಲ್ಲಿ ವಾಸಿಸುವ ಎಲ್ಲಾ ಜನ ಇನ್ನೂ ತಮ್ಮ ಮನೆಗಳಿಗೆ ಹಿಂತಿರುಗದಂತೆ ವಿನಂತಿಸಲಾಗಿದೆ.

ಯಮುನಾ ನದಿ ನೀರಿನ ಮಟ್ಟವು ಅಪಾಯ ಮಟ್ಟಕ್ಕಿಂತ ಕಡಿಮೆಯಾದ ನಂತರವೇ ನಿಮ್ಮ ನಿಮ್ಮ ಮನೆಗಳಿಗೆ ಹಿಂತಿರುಗಿ" ಎಂದು ಅತಿಶಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಯಮುನಾ ನೀರಿನ ಇಂದು ಮಟ್ಟವು ಇಂದು ಬೆಳಗ್ಗೆ 9 ಗಂಟೆಗೆ 205.58 ಮೀಟರ್‌ ಇತ್ತು. ಅದು ಮಧ್ಯಾಹ್ನ 12 ಗಂಟೆಗೆ 205.80 ಮೀಟರ್‌ಗೆ ಏರಿದೆ.

SCROLL FOR NEXT