ದೇಶ

ರಾಜ್ಯಸಭೆ ಕಲಾಪ ನಡೆಸುವ ಮಂಡಳಿ ಪುನರ್ ರಚನೆ: ಮಹಿಳಾ ಸದಸ್ಯರಿಗೆ ಆದ್ಯತೆ

Nagaraja AB

ನವದೆಹಲಿ: ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಅವರ ಅನುಪಸ್ಥಿತಿಯಲ್ಲಿ ಕಲಾಪ ನಡೆಸುವ ಸದಸ್ಯರ ಸಮಿತಿಯನ್ನು ಗುರುವಾರ ಪುನರ್ ರಚಿಸಲಾಗಿದೆ.

 ನೂತನ ಮಂಡಳಿಯಲ್ಲಿ ಶೇಕಡಾ 50 ರಷ್ಟು ಮಹಿಳಾ ಸದಸ್ಯರಿಗೆ ಆದ್ಯತೆ ನೀಡಲಾಗಿದೆ. ಜುಲೈ 17, 2023 ರಿಂದ ಜಾರಿಗೆ ಬರುವಂತೆ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಸಭಾಪತಿ  ಜಗದೀಪ್ ಧನಕರ್ ಅವರು, ರಾಜ್ಯಸಭಾ ಸದಸ್ಯರಿಗೆ ತಿಳಿಸಿದ್ದಾರೆ. 

 ಪಿ.ಟಿ.ಉಷಾ, ಎಸ್.ಫಂಗ್ನಾನ್ ಕೊನ್ಯಾಕ್, ಫೌಜಿಯಾ ಖಾನ್, ಸುಲ್ತಾನ್ ದಿಯೋ, ವಿ.ವಿಜಯಸಾಯಿ ರೆಡ್ಡಿ, ಘನಶ್ಯಾಮ್ ತಿವಾರಿ, ಎಲ್.ಹನುಮಂತಯ್ಯ ಮತ್ತು ಸುಖೇಂದು ಶೇಖರ್ ರೇ ಅವರು ಪುನರ್ ರಚನೆಯಾಗಿರುವ ಮಂಡಳಿಯಲ್ಲಿದ್ದಾರೆ.  ಶೇ.50 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಿರುವುದು ಸದಸ್ಯರಿಗೆ ಸಂತಸವನ್ನುಂಟು ಮಾಡಲಿದೆ ಎಂದು ಸಭಾಪತಿ ಹೇಳಿದ್ದಾರೆ.

ನೂತನ ಮಂಡಳಿ ಮತ್ತೆ ಹೊಸ ಮಂಡಳಿ ರಚಿಸುವವರೆಗೂ ತಮ್ಮ ಕರ್ತವ್ಯದ ಅವಧಿ ಹೊಂದಿರುತ್ತಾರೆ. 

SCROLL FOR NEXT