ದೇಶ

ಯುದ್ದ ನೌಕೆ 'ಐಎನ್‌ಎಸ್ ವಿಕ್ರಾಂತ್' ನಲ್ಲಿ ನಾವಿಕನ ಶವ ಪತ್ತೆ

Nagaraja AB

ಬಿಹಾರ: ಯುದ್ಧ ವಿಮಾನ ವಾಹಕ ಐಎನ್‌ಎಸ್ ವಿಕ್ರಾಂತ್ ನಲ್ಲಿ ಗುರುವಾರ ಮುಂಜಾನೆ 19 ವರ್ಷದ ನೌಕಾ ಪಡೆಯ ನಾವಿಕರೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.

ಇದು  ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣವೆಂದು ಕಂಡುಂಬಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅದು ಹೇಳಿದೆ.

ಅವಿವಾಹಿತ ನಾವಿಕ ಬಿಹಾರದ ಮುಜಾಫರ್‌ಪುರಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT