ನರೇಶ್ ಬನ್ಸಾಲ್ 
ದೇಶ

ಇಂಡಿಯಾ ಎಂಬುದು, ವಸಾಹತುಶಾಹಿ ಗುಲಾಮಗಿರಿ ಸಂಕೇತ; ಭಾರತಕ್ಕೆ ಆ ಹೆಸರು ಬೇಡ: ಬಿಜೆಪಿ ಸಂಸದ

ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ  ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.

ದೆಹಲಿ: ಭಾರತ ದೇಶಕ್ಕೆ ಇಂಡಿಯಾ ಎಂಬ ಹೆಸರು ಬೇಡ, ಅದು ವಸಾಹತುಶಾಹಿ ಗುಲಾಮಗಿರಿ ಸಂಕೇತ, ಹೀಗಾಗಿ  ಸಂವಿಧಾನದಲ್ಲಿ ಇಂಡಿಯಾ ಎಂಬ ಹೆಸರನ್ನು ತೆಗೆಯಬೇಕು ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ನರೇಶ್ ಬನ್ಸಾಲ್ ಆಗ್ರಹಿಸಿದ್ದಾರೆ.

ಶುಕ್ರವಾರ ರಾಜ್ಯಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಎಂಬುದು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಪ್ರಖರತೆ ಪಡೆದುಕೊಂಡು ಹೆಸರಾಗಿದೆ. ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಸಹಸ್ರಾರು ವರ್ಷಗಳಿಂದ ಇದೆ. ಇಂಡಿಯಾವನ್ನು ಅಧಿಕೃತವಾಗಿ ಭಾರತ ಎಂದು ಹೆಸರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನರೇಶ್‌ ಬನ್ಸಾಲ್ ಅವರು ಉತ್ತರಾಖಂಡ ರಾಜ್ಯದಿಂದ ರಾಜ್ಯಸಭೆ ಸಂಸದರಾಗಿದ್ದು, ಅಲ್ಲಿನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತಕ್ಕೆ ಇಂಡಿಯಾ ಎಂಬ ಹೆಸರು ಗುಲಾಮಗಿರಿಯ ಸಂಕೇತವೇ ಹೊರತು ಮತ್ತೇನೂ ಎಲ್ಲ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇಂಡಿಯಾವನ್ನು ತೆಗೆದುಹಾಕಿ ಭಾರತ ಎಂದು ಪುನರ್‌ನಾಮಕರಣ ಮಾಡುವುದು ಮಹತ್ವದ ಮೈಲುಗಲ್ಲಾಗುತ್ತದೆ. ನಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿಯುತ್ತದೆ’ ಎಂದು ಬನ್ಸಾಲ್ ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!