ಕೇಂದ್ರ ಸಚಿವ ಅನುರಾಗ್ ಠಾಕೂರ್ 
ದೇಶ

ಇದೆಲ್ಲಾ ನಾಟಕವಷ್ಟೇ: 20 ವಿಪಕ್ಷ ಸಂಸದರ ನಿಯೋಗ ಮಣಿಪುರ ಭೇಟಿ ಕುರಿತು ಬಿಜೆಪಿ ಕಿಡಿ

ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಹೊಸ ಮೈತ್ರಿ ಕೂಟವಾದ ಇಂಡಿಯಾದ ನಾಯಕರು ಶನಿವಾರ ಭೇಟಿ ನೀಡಿರುವುದರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ನವದೆಹಲಿ: ಕಳೆದ 3 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಈಶಾನ್ಯ ರಾಜ್ಯ ಮಣಿಪುರಕ್ಕೆ ವಿಪಕ್ಷಗಳ ಹೊಸ ಮೈತ್ರಿ ಕೂಟವಾದ ಇಂಡಿಯಾದ ನಾಯಕರು ಶನಿವಾರ ಭೇಟಿ ನೀಡಿರುವುದರ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.

ವಿಪಕ್ಷ ಸಂಸದರ ಮಣಿಪುರ ಭೇಟಿ ನೀಡಿರುವುದರ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಾಗ್ದಾಳಿ ನಡೆಸಿದ್ದಾರೆ. ಇವೆಲ್ಲಾ ಕೇವಲ ನಾಟಕವಷ್ಟೇ ಎಂದು ಹೇಳಿದ್ದಾರೆ.

ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಹೇಯ ಕೃತ್ಯಗಳು ನಡೆದಿದ್ದವು. ಆಗೇಕೆ ಈ ನಾಯಕರು ಆ ರಾಜ್ಯಗಳಿಗೆ ಭೇಟಿ ನೀಡಲಿಲ್ಲ. ವಿಪಕ್ಷಗಳ ಮಣಿಪುರ ಭೇಟಿ ಕೇವಲ ನಾಟಕವಷ್ಟೇ. ವಿಪಕ್ಷಗಳ INDIA ಮೈತ್ರಿಕೂಟ ಮಣಿಪುರದಿಂದ ವಾಪಸ್ಸಾದ ಬಳಿಕ ಅವರನ್ನು ಪಶ್ಚಿಮಬಂಗಾಳಕ್ಕೂ ಕರೆದುಕೊಂಡು ಹೋಗುವಂತೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ನಡೆದ ಕೃತ್ಯಗಳನ್ನು ಅಧೀರ್ ರಂಜನ್ ಚೌಧರಿಯವರು ಸಮರ್ಥಿಸಿಕೊಳ್ಳುತ್ತಾರೆಯೇ? ಈ 20 ಸಂಸದರು ರಾಜಸ್ತಾನ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಭೇಟಿ ನೀಡಿ, ವರದಿ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಡಗುಗಳ ಮೇಲೆ ಇರಾನ್ ದಾಳಿ: 'ಕದನ ವಿರಾಮ ಉಲ್ಲಂಘನೆ ಮೂರ್ಖತನ-ಟ್ರಂಪ್ ಕೆಂಡಾಮಂಡಲ!

Bidadi Township Project: ಸಿಎಂ ಡಿಕೆ ಶಿವಕುಮಾರ್ ಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆಯವರೆಗೂ ಕಾಯುವೆ- ಕುಮಾರಸ್ವಾಮಿ

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ದೆಹಲಿಗೆ ತಮಿಳುನಾಡು ವಿಶೇಷ ಪ್ರತಿನಿಧಿಯಾಗಿ ಜನ ನಾಯಗನ್ ನಿರ್ಮಾಪಕನ ನೇಮಕ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು