ಇಸ್ರೋ ಪಿಎಸ್ಎಲ್ ವಿ ರಾಕೆಟ್ ಉಡಾವಣೆ 
ದೇಶ

ಇಸ್ರೋ: ಸಿಂಗಾಪುರದ 7 ಉಪಗ್ರಹಗಳ ಹೊತ್ತು ಯಶಸ್ವಿಯಾಗಿ ಉಡಾವಣೆಯಾದ ಪಿಎಸ್​ಎಲ್​ವಿ-ಸಿ56

7 ವಿದೇಶಿ ಉಪಗ್ರಹಗಳನ್ನು ಹೊತ್ತು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ-ಸಿ56 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

ಶ್ರೀಹರಿಕೋಟಾ: 7 ವಿದೇಶಿ ಉಪಗ್ರಹಗಳನ್ನು ಹೊತ್ತು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ-ಸಿ56 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

ಚಂದ್ರಯಾನ-3 ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ರಾಕೆಟ್​ ಉಡಾವಣೆ ಮಾಡಿದ್ದು, ಸಿಂಗಾಪೂರದ ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ-ಸಿ56 ರಾಕೆಟ್​ ಅನ್ನು​ ಇಂದು ಬೆಳಗ್ಗೆ 6.30ಕ್ಕೆ ಆಂಧ್ರ ಪ್ರದೇಶದದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರ (ಎಸ್​ಡಿಎಸ್​ಸಿ) ದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಇಂದು ಬೆಳಗ್ಗೆ 6.30ಕ್ಕೆ ಪಿಎಸ್ ಎಲ್ ವಿ ರಾಕೆಟ್ ಉಡಾವಣೆಯಾಗಿದ್ದು, ಎಲ್ಲ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಎಲ್ಲಾ ಉಪಗ್ರಹಗಳನ್ನು 5 ಕಕ್ಷೆಯ ಇಳಿಜಾರಿನೊಂದಿಗೆ 535 ಕಿಮೀ ವೃತ್ತಾಕಾರಕ್ಕೆ ಸೇರಿಸಲಾಗುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಇದು ಇಸ್ರೋದ 56ನೇ ಕಾರ್ಯಾಚರಣೆಯಾಗಿದ್ದು, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ಎಲ್ ವಿ) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್​ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. 

ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, 'PSLV-C56 ರಾಕೆಟ್​ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. PSLV-C56 / DS-SAR ಎಂಬುದು ಸಿಂಗಾಪುರದ ST ಇಂಜಿನಿಯರಿಂಗ್‌ಗಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಮೀಸಲಾದ ಕಮರ್ಷಿಯಲ್​ ಮಿಷನ್ ಆಗಿದೆ. ಈ DS-SAR ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು, ಈ ಮಿಷನ್​ನ ಪ್ರಾಥಮಿಕ ಉಪಗ್ರಹವಾಗಿದ್ದು, ಇದು ಎರಡು ಆಯಾಮದ ಚಿತ್ರಗಳನ್ನು ಅಥವಾ ವಸ್ತುಗಳ ಮೂರು ಆಯಾಮದ ಪುನರ್ ನಿರ್ಮಾಣಗಳನ್ನು ರಚಿಸುವ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಹೊಂದಿದೆ. 

ಇದು ಸೇರಿದಂತೆ ಸಿಂಗಾಪುರಕ್ಕೆ ಸಂಬಂಧಿಸಿದ 7 ಉಗ್ರಹಗಳನ್ನು ಸಹ PSLV-C56 ರಾಕೆಟ್​ ಹೊತ್ತೊಯ್ದಿದೆ. DS-SAR ಉಪಗ್ರಹವನ್ನು DSTA (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ST ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವು ಸ್ಥಾಪನೆಯಾಗಿ ಕಾರ್ಯಾಚರಣೆ ಆರಂಭಿಸಿದ ನಂತರ ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳು ಉಪಗ್ರಹ ಚಿತ್ರಣಗಳನ್ನು ಬಳಸಿಕೊಳ್ಳಲಿವೆ ಎಂದು ಹೇಳಲಾಗಿದೆ. 

ST ಇಂಜಿನಿಯರಿಂಗ್ ಕಂಪನಿಯು ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಪ್ರತಿಕ್ರಿಯೆ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ. DS-SAR ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಪೇಲೋಡ್ ಅನ್ನು ಹೊಂದಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT