ಸಾಂದರ್ಭಿಕ ಚಿತ್ರ 
ದೇಶ

ಕೆನಡಾದಿಂದ 700 ಭಾರತೀಯ ವಿದ್ಯಾರ್ಥಿಗಳು ಗಡಿಪಾರು! ವಿದೇಶಾಂಗ ಸಚಿವರ ಮಧ್ಯ ಪ್ರವೇಶಕ್ಕೆ ಒತ್ತಾಯ

ಕೆನಡಾದಿಂದ ಗಡಿಪಾರು ಎದುರಿಸುತ್ತಿರುವ 700 ಭಾರತೀಯ ವಿದ್ಯಾರ್ಥಿಗಳ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರನ್ನು ಪಂಜಾಬ್ ಎನ್ ಆರ್ ಐ ವ್ಯವಹಾರ ಸಚಿವ ಕುಲದೀಫ್ ಸಿಂಗ್ ಧಲಿವಾಲ್ ಕೋರಿದ್ದಾರೆ.

ನವದೆಹಲಿ: ಕೆನಡಾದಿಂದ ಗಡಿಪಾರು ಎದುರಿಸುತ್ತಿರುವ 700 ಭಾರತೀಯ ವಿದ್ಯಾರ್ಥಿಗಳ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರನ್ನು ಪಂಜಾಬ್ ಎನ್ ಆರ್ ಐ ವ್ಯವಹಾರ ಸಚಿವ ಕುಲದೀಫ್ ಸಿಂಗ್ ಧಲಿವಾಲ್ ಕೋರಿದ್ದಾರೆ.

ಜೈಶಂಕರ್‌ಗೆ ಪತ್ರ ಬರೆದಿರುವ ಧಲಿವಾಲ್, ಈ ವಿಚಾರವಾಗಿ ಅವರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದಾರೆ. ಕೆನಡಾದ ಶಿಕ್ಷಣ ಸಂಸ್ಥೆಗಳ ಪ್ರವೇಶ ಪತ್ರಗಳು ನಕಲಿ ಎಂಬುದನ್ನು ಆ ದೇಶದ ಅಧಿಕಾರಿಗಳು ಕಂಡುಹಿಡಿದ ನಂತರ ಬಹುತೇಕ ಪಂಜಾಬ್‌ನ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ ಗಡಿಪಾರು ಎದುರಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಜಿ ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ವಿದೇಶಾಂಗ ಸಚಿವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೇನೆ. ಇದರಿಂದಾಗಿ ಇಡೀ ವಿಷಯವನ್ನು ವೈಯಕ್ತಿಕವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರಬಹುದು" ಎಂದು ಧಲಿವಾಲ್ ಹೇಳಿದರು. ಗಡಿಪಾರು ಆಗಿರುವ 700 ವಿದ್ಯಾರ್ಥಿಗಳು ಮುಗ್ದರು ಮತ್ತು ವಂಚಕರ ಗುಂಪಿನಿಂದ ಮೋಸ ಹೋಗಿದ್ದಾರೆ ಎಂದು ವಿದೇಶಾಂಗ ಸಚಿವರಿಗೆ ಬರೆದಿರುವ ಪತ್ರದಲ್ಲಿ ಧಲಿವಾಲ್ ಹೇಳಿದ್ದಾರೆ. 

ಮತ್ತೊಮ್ಮೆ ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿದರೆ ಮತ್ತು ಕೆನಡಾದ ಹೈಕಮಿಷನ್, ಕೆನಡಾದ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಮಾತನಾಡಿದರೆ ಈ ವಿದ್ಯಾರ್ಥಿಗಳನ್ನು ಗಡಿಪಾರು ಮಾಡದಂತೆ ತಡೆಯಬಹುದು ಎಂದು ಧಲಿವಾಲ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!