ದೇಶ

ಮುಖ್ಯಾಂಶಗಳ ನಿರ್ವಹಣೆ: ಒಡಿಶಾ ರೈಲು ಅಪಘಾತದ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು; ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

Ramyashree GN

ನವದೆಹಲಿ: ಒಡಿಶಾ ರೈಲು ದುರಂತದ ಕುರಿತು ಸಿಬಿಐ ತನಿಖೆಗೆ ಕೋರಿರುವ ಬಗ್ಗೆ ಮಂಗಳವಾರ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಈ ಕ್ರಮವನ್ನು ಮುಖ್ಯಾಂಶ ನಿರ್ವಹಣೆ ಎಂದು ಬಣ್ಣಿಸಿದೆ. ಸರ್ಕಾರವು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸುವ ಬದಲು 'ಮುಖ್ಯಾಂಶಗಳ ನಿರ್ವಹಣೆ'ಯಲ್ಲಿ ತೊಡಗಿದೆ ಎಂದು ದೂರಿದೆ. 

ಅಪಘಾತದ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸಂಜೆ ಘೋಷಿಸಿದ್ದರು.

ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಬಾಲಾಸೋರ್ ರೈಲು ದುರಂತದ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು ತಮ್ಮ ವರದಿಯನ್ನು ಸಲ್ಲಿಸುವ ಮೊದಲೇ ಸಿಬಿಐ ತನಿಖೆಯನ್ನು ಘೋಷಿಸಲಾಗಿದೆ. ಸಿಬಿಐ ತನಿಖೆಯ ಈ ಅಕಾಲಿಕ ಘೋಷಣೆಯು ಘಟನೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಹರಿಸುವತ್ತ ಗಮನ ಹರಿಸುವುದಕ್ಕಿಂತ ಹೆಚ್ಚಾಗಿ ಗಮನವನ್ನು ಬೇರೆಡೆಗೆ ತಿರುಗಿಸಲು ಮತ್ತು ಸಕಾರಾತ್ಮಕ ಮಾಧ್ಯಮ ಪ್ರಸಾರವನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಹೊರತು ಬೇರೇನೂ ಅಲ್ಲ' ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ. 

SCROLL FOR NEXT