ದೇಶ

ಲಖನೌ ಕೋರ್ಟ್‌ನಲ್ಲಿ  ಗುಂಡಿನ ದಾಳಿ: ತನಿಖೆಗೆ ಮೂವರು ಸದಸ್ಯರ ಎಸ್‌ಐಟಿ ರಚನೆ

Nagaraja AB

ಲಖನೌ: ಉತ್ತರ ಪ್ರದೇಶದ ಲಖನೌ ಸಿವಿಲ್ ಕೋರ್ಟ್‌ನೊಳಗೆ ನಡೆದ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಯುಪಿ ಮುಖ್ಯಮಂತ್ರಿಗಳ ಕಚೇರಿ ಬುಧವಾರ ತಿಳಿಸಿದೆ.

ದರೋಡೆಕೋರ ಸಂಜೀವ್ ಅಲಿಯಾಸ್ ಜೀವಾನನ್ನು ವಿಚಾರಣೆಗೆ ಕರೆತಂದಾಗ ನ್ಯಾಯಾಲಯದ ಆವರಣದಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ನಂತರ ಗಾಯಗೊಂಡು  ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಈ ಹತ್ಯೆಯ ತನಿಖೆಗಾಗಿ ಲಖನೌ ಜಂಟಿ ಸಿಪಿ ಎಡಿಜಿ ತಾಂತ್ರಿಕ ಮೋಹಿತ್ ಅಗರ್ವಾಲ್, ನೀಲಬ್ಜಾ ಚೌಧರಿ ಮತ್ತು ಅಯೋಧ್ಯೆ ಐಜಿ ಪ್ರವೀಣ್ ಕುಮಾರ್ ಸೇರಿದಂತೆ ಮೂವರು ಸದಸ್ಯರ ಎಸ್‌ಐಟಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅಧಿಕೃತ ಹೇಳಿಕೆ ತಿಳಿಸಿದೆ. 

ಸಂಜೀವ್  ಜೀವಾನ ಮೇಲೆ ಇಂದು ಗುಂಡಿನ ದಾಳಿ ನಡೆದಿತ್ತು. ಗಾಯಗೊಂಡು ಆತ ಸಾವನ್ನಪ್ಪಿದ್ದಾನೆ. ಇಬ್ಬರೂ ಪೊಲೀಸರಿಗೂ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ಲಖನೌ ಉಪ ಪೊಲೀಸ್ ಆಯುಕ್ತ ರಾಹುಲ್ ರಾಜ್ ಮಾಹಿತಿ ನೀಡಿದ್ದಾರೆ.  

ಈ ಮಧ್ಯೆ ಗುಂಡಿನ ದಾಳಿ ಹಿನ್ನೆಲೆಯಲ್ಲಿ ವಕೀಲರು ಲಖನೌ ಸಿವಿಲ್ ಕೋರ್ಟ್ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಘಟನೆಯಲ್ಲಿ ಮಗುವೂ ಗಾಯಗೊಂಡಿದ್ದು, ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ ಎಂದು ಲಖನೌ ಜಂಟಿ ಪೊಲೀಸ್ ಆಯುಕ್ತ ಉಪೇಂದ್ರ ಕುಮಾರ್  ಅಗರ್ವಾಲ್ ಹೇಳಿದ್ದಾರೆ.

SCROLL FOR NEXT