ರೈಲು ಅಪಘಾತದ ಸ್ಥಳ 
ದೇಶ

ಒಡಿಶಾ ರೈಲು ದುರಂತ: ಬಿಹಾರದ 19 ಪ್ರಯಾಣಿಕರು ನಾಪತ್ತೆ, 50 ಸಾವು- ವಿಪತ್ತು ನಿರ್ವಹಣಾ ಇಲಾಖೆ

ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ...

ಪಾಟ್ನಾ: ಜೂನ್ 2 ರಂದು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಜನ ಸಾವನ್ನಪ್ಪಿದ್ದು, ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಬಿಹಾರದ ಕನಿಷ್ಠ 19 ಜನ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ(ಡಿಎಂಡಿ) ತಿಳಿಸಿದೆ.

ನಾಪತ್ತೆಯಾದ ಬಿಹಾರದ 19 ಪ್ರಯಾಣಿಕರ ಪೈಕಿ ಮಧುಬನಿ ಜಿಲ್ಲೆಯ ನಾಲ್ವರು, ದರ್ಭಾಂಗಾ ಜಿಲ್ಲೆಯ ಇಬ್ಬರು, ಮುಜಾಫರ್‌ಪುರದ ಇಬ್ಬರು, ಪೂರ್ವ ಚಂಪಾರಣ್ ಜಿಲ್ಲೆಯ ಇಬ್ಬರು, ಸಮಸ್ತಿಪುರದ ಇಬ್ಬರು, ಸಿತಾಮರ್ಹಿಯ ಒಬ್ಬರು, ಪಾಟ್ನಾದ ಒಬ್ಬರು ಹಾಗೂ ಗಯಾದ ಒಬ್ಬರು, ಪೂರ್ಣಿಯಾದ ಒಬ್ಬರು, ಶೇಖ್‌ಪುರದ ಒಬ್ಬರು, ಸಿವಾನ್ ನ ಒಬ್ಬರು ಮತ್ತು ಬೇಗುಸರಾಯ್ ಒಬ್ಬರು ಸೇರಿದ್ದಾರೆ. ಎಂದು ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಒಡಿಶಾ ರೈಲು ಅಪಘಾತದಲ್ಲಿ ಬಿಹಾರದ ವಿವಿಧ ಜಿಲ್ಲೆಗಳ ಕನಿಷ್ಠ 50 ಜನ ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.

ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಬಿಹಾರದ 50 ಜನರಲ್ಲಿ ಒಂಬತ್ತು ಮಂದಿ ಮುಜಾಫರ್‌ಪುರ ಜಿಲ್ಲೆಯವರು, ಮಧುಬನಿ (6), ಭಾಗಲ್‌ಪುರ (7), ಪೂರ್ವ ಚಂಪಾರಣ್ (5), ಪೂರ್ಣಿಯಾ (2), ಪಶ್ಚಿಮ ಚಂಪಾರಣ್ (3), ನಾವಡಾ (2) , ದರ್ಬಂಗಾ (2), ಜಮುಯಿ (2), ಸಮಸ್ತಿಪುರ್ (3), ಬಂಕಾ (1), ಬೆವ್ಗುಯಿಸಾರೈ (1), ಗಯಾ (1), ಖಗರಿಯಾ (3), ಶರ್ಷಾ (1), ಸಿತಾಮರ್ಹಿ (1) ಮತ್ತು ಮುಂಗೇರ್ ಜಿಲ್ಲೆಯ ಒಬ್ಬರು ಎಂದು ಪ್ರಕಟಣೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!