ಶರದ್ ಪವಾರ್ 
ದೇಶ

ಎನ್ ಸಿಪಿ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್ ನೇಮಕ: ಶರದ್ ಪವಾರ್ ಅಧಿಕೃತ ಘೋಷಣೆ

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ  ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್  ಅವರನ್ನು ನೇಮಿಸಿ ಎನ್ ಸಿ ಪಿ ಹಿರಿಯ ಮುಖಂಡ ಶರದ್ ಪವಾರ್ ಆದೇಶ ಹೊರಡಿಸಿದ್ದಾರೆ.

ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ  ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್  ಅವರನ್ನು ನೇಮಿಸಿ ಎನ್ ಸಿ ಪಿ ಹಿರಿಯ ಮುಖಂಡ ಶರದ್ ಪವಾರ್ ಆದೇಶ ಹೊರಡಿಸಿದ್ದಾರೆ.

1999 ರಲ್ಲಿ ಶರದ್ ಪವಾರ್ ಮತ್ತು ಪಿ ಎ ಸಂಗ್ಮಾ ಸೇರಿ ಸ್ಥಾಪಿಸಿದ ಪಕ್ಷಕ್ಕೆ ಇಂದು 25 ನೇ ವಾರ್ಷಿಕೋತ್ಸವ. ಈ ಸಮಾರಂಭದಲ್ಲಿ ಪವಾರ್ ಈ ಘೋಷಣೆ ಮಾಡಿದರು. ಎನ್‌ಸಿಪಿಯ ಪ್ರಮುಖ ನಾಯಕ ಅಜಿತ್ ಪವಾರ್ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.

ಅಜಿತ್ ಪವಾರ್ ಕಳೆದ ತಿಂಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ಅದರ ನಂತರ ಪಕ್ಷದ ಸದಸ್ಯರು ಮತ್ತು ಇತರ ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪವಾರ್ ಅವರ ಪ್ರಸ್ತಾಪವನ್ನು ಚರ್ಚಿಸಲು ರಚಿಸಲಾದ ಎನ್‌ಸಿಪಿ ಸಮಿತಿಯು ಮೇ 5 ರಂದು ಅವರ ರಾಜೀನಾಮೆಯನ್ನು ತಿರಸ್ಕರಿಸಿತು ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸಿತು.

ಇದು 2024 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ, ರಾಜ್ಯ ಸಭೆ ಲೋಕಸಭೆ ಕೆಲಸಗಳನ್ನು ವಿಂಗಡಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

National Herald case ನಲ್ಲಿ ಸೋನಿಯಾ-ರಾಹುಲ್ ಗಾಂಧಿಗೆ ಕೊಂಚ ನಿರಾಳ: ಇಡಿ ದೂರು ಪರಿಗಣಿಸಲು ದೆಹಲಿ ಕೋರ್ಟ್ ನಕಾರ

ದೆಹಲಿ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ದಟ್ಟ ಮಂಜಿನಿಂದ ಭೀಕರ ಅಪಘಾತ, ಹಲವು ವಾಹನಗಳಿಗೆ ಬೆಂಕಿ: ನಾಲ್ವರು ಸಾವು, 66 ಮಂದಿ ಗಾಯ-Video

ಪಶ್ಚಿಮ ಬಂಗಾಳದಲ್ಲಿ SIR: ಚುನಾವಣಾ ಆಯೋಗದಿಂದ ಡಿಲೀಟ್ ಮಾಡಿದ ಮತದಾರರ ಕರಡು ಪಟ್ಟಿ ಪ್ರಕಟ

ಭಾಷಣ ಎಡಿಟ್ ಮಾಡಿ ಪ್ರಸಾರ: BBC ವಿರುದ್ಧ ಗುಡುಗಿದ ಟ್ರಂಪ್, 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ..!

ಬೋಂಡಿ ಬೀಚ್‌ ಗುಂಡಿನ ದಾಳಿ: ಭಾರತೀಯ ಪ್ರಜೆಯಾಗಿ ಹಂತಕನ ತಂದೆ ಫಿಲಿಪೈನ್ಸ್‌ ಪ್ರವೇಶ; ವಲಸೆ ಅಧಿಕಾರಿಗಳ ಮಾಹಿತಿ

SCROLL FOR NEXT