ದೇಶ

ಪ್ರತಿಕೂಲ ಹವಾಮಾನ, ಪಾಕ್ ಗೆ ತೆರಳಿದ ಇಂಡಿಗೋ ವಿಮಾನ!

Nagaraja AB

ಅಮೃತಸರ: ಅಮೃತಸರದಿಂದ ಅಹಮದಾಬಾದ್‌ಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನ ಪ್ರತಿಕೂಲ ಹವಾಮಾನದಿಂದಾಗಿ ಪಾಕಿಸ್ತಾನಕ್ಕೆ ತೆರಳಿದ ಘಟನೆ ನಡೆದಿದೆ. ಲಹೋರ್ ಬಳಿಯ ಗುಜ್ರಾನ್‌ವಾಲಾಕ್ಕೆ ತೆರಳಿದ ವಿಮಾನ ಯಾವುದೇ ಅಪಘಾತವಿಲ್ಲದೆ ಭಾರತೀಯ ವಾಯುಪ್ರದೇಶಕ್ಕೆ ಹಿಂತಿರುಗಿದೆ ಎಂದು ಭಾನುವಾರ ಮಾಧ್ಯಮವೊಂದು ವರದಿ ಮಾಡಿದೆ.

ಫ್ಲೈಟ್ ರಾಡಾರ್ ಪ್ರಕಾರ, 454 ನ್ಯಾಟಿಕಲ್ ಮೈಲಿ ವೇಗದ ಭಾರತೀಯ ವಿಮಾನ ಶನಿವಾರ ಸಂಜೆ 7:30 ರ ಸುಮಾರಿಗೆ ಲಾಹೋರ್‌ನ ಉತ್ತರಕ್ಕೆ ಪ್ರವೇಶಿಸಿತು ಮತ್ತು ರಾತ್ರಿ 8:01 ಕ್ಕೆ ಭಾರತಕ್ಕೆ ಮರಳಿತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ವಿಮಾನಯಾನ ಸಂಸ್ಥೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ವಿಮಾನ ಪಾಕಿಸ್ತಾನಕ್ಕೆ ತೆರಳಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಮೇ ತಿಂಗಳಲ್ಲಿ, ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿತು ಮತ್ತು ಪಾಕಿಸ್ತಾನದಲ್ಲಿ ಭಾರೀ ಮಳೆಯಿಂದಾಗಿ ಸುಮಾರು 10 ನಿಮಿಷಗಳ ಕಾಲ ಅಲ್ಲಿಯೇ ಇತ್ತು. ಮೇ 4 ರಂದು ಮಸ್ಕತ್ ನಿಂದ ಹಿಂತಿರುಗುತ್ತಿದ್ದ ಪಿಕೆ 248 ವಿಮಾನ ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಿತಾದರೂ ಭಾರೀ  ಮಳೆಯಿಂದಾಗಿ ಬೋಯಿಂಗ್ 777 ವಿಮಾನ ಲ್ಯಾಂಡ್ ಮಾಡಲು ಪೈಲಟ್ ಗೆ  ಕಷ್ಟವಾಗಿತ್ತು.

SCROLL FOR NEXT