ದೇಶ

ಹಾಜರಾತಿಯಿಂದ ವಿನಾಯಿತಿ ಆಗಸ್ಟ್ 2 ರವರೆಗೆ ವಿಸ್ತರಿಸಿದ ಹೈಕೋರ್ಟ್; ರಾಹುಲ್‌ ಗಾಂಧಿಗೆ ರಿಲೀಫ್

Lingaraj Badiger

ಮುಂಬೈ: 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಲಾಗಿದ್ದ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ಆಗಸ್ಟ್ 2ರವರೆಗೆ ವಿಸ್ತರಿಸಿದೆ.

ರಫೇಲ್ ಯುದ್ಧವಿಮಾನ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರನ್ನು "ಕಮಾಂಡರ್-ಇನ್-ಥೀಫ್" ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ಸಂಬಂಧ ಬಿಜೆಪಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ದೂರುದಾರ ವಕೀಲರು ಸಮಯಾವಕಾಶ ಕೋರಿದ ನಂತರ 2021 ರಲ್ಲಿ ಸ್ಥಳೀಯ ನ್ಯಾಯಾಲಯ ತನಗೆ ನೀಡಿದ್ದ ಸಮನ್ಸ್ ಅನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ವಿ ಕೊತ್ವಾಲ್ ಅವರ ಏಕ ಸದಸ್ಯ ಪೀಠ, "ಈ ಹಿಂದೆ ನೀಡಲಾದ ಹಾಜರಾತಿಯಿಂದ ವಿನಾಯಿತಿ ಆಗಸ್ಟ್ 2 ರವರೆಗೆ ಮುಂದುವರಿಯುತ್ತದೆ" ಎಂದು ಹೇಳಿ, ವಿಚಾರಣೆ ಮುಂದೂಡಿದ್ದಾರೆ.

SCROLL FOR NEXT