ಬಾಲಿವುಡ್ ನಟ ಮನೋಜ್ ಬಾಜ್ ಪೇಯಿ 
ದೇಶ

ಎಂದಿಗೂ ರಾಜಕೀಯ ಸೇರಲ್ಲ: ಬಾಲಿವುಡ್ ನಟ ಮನೋಜ್ ಬಾಜಪೇಯಿ

ಬಿಹಾರ ಮೂಲದ ಖ್ಯಾತ ಬಾಲಿವುಡ್ ನಟ ಮನೋಜ್ ಬಾಜ್‌ಪೇಯಿ ಎಂದಿಗೂ ರಾಜಕೀಯ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಪಾಟ್ನಾ: ಬಿಹಾರ ಮೂಲದ ಖ್ಯಾತ ಬಾಲಿವುಡ್ ನಟ ಮನೋಜ್ ಬಾಜ್‌ಪೇಯಿ ಎಂದಿಗೂ ರಾಜಕೀಯ ಸೇರುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ಬಾರಿ ಬಿಹಾರಕ್ಕೆ ಭೇಟಿ ನೀಡಿದಾಗ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪುತ್ರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿದ್ದೆ. ಅಂದಿನಿಂದ ರಾಜಕೀಯ ಸೇರುತ್ತೇನೆ ಎಂದು ಜನರು ಊಹಿಸುತ್ತಿದ್ದಾರೆ ಆದರೆ, ರಾಜಕೀಯ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಲ್ವಾ ಗ್ರಾಮದವರಾದ ಬಾಜ್‌ಪೇಯಿ ಇತ್ತೀಚೆಗೆ ಬಿಡುಗಡೆಯಾದ ಸಿರ್ಫ್ ಏಕ್ ಬಂದಾ ಕಾಫಿ ಹೈ ಚಿತ್ರದ ಪ್ರಚಾರಕ್ಕಾಗಿ ಪಾಟ್ನಾಕ್ಕೆ ಆಗಮಿಸಿದ್ದಾರೆ. ಈ ಚಿತ್ರದಲ್ಲಿ ಅವರು ಪ್ರಬಲವಾದ ವಕೀಲ ಪಾತ್ರವನ್ನು ಮಾಡಿದ್ದಾರೆ. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಹಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಜಪೇಯಿ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಮೂರು ರಾಷ್ಟ್ರೀಯ ಪ್ರಶಸ್ತಿ ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿರುವ ಬಾಜಪೇಯಿ, ನಟನಾಗಿಯೇ ಉಳಿಯುತ್ತೇನೆ, ಎಂದಿಗೂ ರಾಜಕೀಯ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಇದೇ ವೇಳೆ ಬಿಹಾರ ಸರ್ಕಾರದ ಹೊಸ ಚಲನಚಿತ್ರ ನೀತಿ ಕುರಿತು ಕೇಳಲಾದ ಪ್ರಶ್ನೆಗೆ, ಬಾಜ್‌ಪೇಯಿ, ರಾಜ್ಯ ಸರ್ಕಾರವು ತಕ್ಷಣವೇ ಹೊಸ ಚಲನಚಿತ್ರ ನೀತಿಯನ್ನು ಪರಿಚಯಿಸಬೇಕು, ಇದು ರಾಜ್ಯದ ಕಲಾವಿದರಿಗೆ ಸರಿಯಾದ ಮಾನ್ಯತೆ ನೀಡುತ್ತದೆ. ಇದು ಬಿಹಾರದಲ್ಲಿ ಚಿತ್ರೀಕರಣ ಮಾಡಲು ಬಯಸುವ ಚಲನಚಿತ್ರ ನಿರ್ಮಾಪಕರಿಗೂ ಪ್ರಯೋಜನವನ್ನು ನೀಡುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ