ಸಂಗ್ರಹ ಚಿತ್ರ 
ದೇಶ

ಸಿರಿಧಾನ್ಯ ಮಹತ್ವ ಕುರಿತು ಗೀತೆ ರಚನೆ: ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾಗೆ ಪ್ರಧಾನಿ ಮೋದಿ ನೆರವು

ಸಿರಿಧಾನ್ಯಗಳ ಮಹತ್ವ ಕುರಿತು ಉತ್ತೇಜನ ನೀಡಲು, ಭಾರತ ಮೂಲದ ಅಮೆರಿಕನ್ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಲು ರಚಿಸಿರುವ ‘ಅಬಂಡೆನ್ಸ್‌ ಇನ್ ಮಿಲೆಟ್ಸ್‌’ ವಿಶೇಷ ಗೀತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಜೋಡಿಸಿದ್ದಾರೆ.

ನ್ಯೂಯಾರ್ಕ್‌: ಸಿರಿಧಾನ್ಯಗಳ ಮಹತ್ವ ಕುರಿತು ಉತ್ತೇಜನ ನೀಡಲು, ಭಾರತ ಮೂಲದ ಅಮೆರಿಕನ್ ಗಾಯಕಿ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಲು ರಚಿಸಿರುವ ‘ಅಬಂಡೆನ್ಸ್‌ ಇನ್ ಮಿಲೆಟ್ಸ್‌’ ವಿಶೇಷ ಗೀತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಜೋಡಿಸಿದ್ದಾರೆ.

ಫಲು ಎಂದೇ ಪ್ರಸಿದ್ಧಿ ಪಡೆದಿರುವ ಮುಂಬೈ ಸಂಜಾತೆ ಗಾಯಕಿ, ಗೀತೆರಚನೆಗಾರ್ತಿ ಫಾಲ್ಗುಣಿ ಶಾ ಮತ್ತು ಆಕೆಯ ಪತಿ ಗಾಯಕ ಗೌರವ್‌ ಶಾ ಈ ಗೀತೆ ರಚಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ಜೂನ್‌ 16ರಂದು ಗೀತೆ ಬಿಡುಗಡೆ ಆಯಿತು.

ನಾನು ಮತ್ತು ನನ್ನ ಪತಿ ಗೌರವ್ ಶಾ ಜೊತೆಗೂಡಿ ಪ್ರಧಾನಿ ಮೋದಿ ಅವರು ಈ ಗೀತೆ ರಚಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿರುವ ಈ ಗೀತೆಯು ಸಿರಿಧಾನ್ಯಗಳ ಮಹತ್ವವನ್ನು ಸಾರಲಿದೆ. ಗೀತೆಯನ್ನು ಹೆಚ್ಚಿನ ಜನರಿಗೆ ತಲುಪುವಂತೆ ವಿವಿಧ ಪ್ರಾದೇಶಿಕ ಭಾಷೆಗಳಿಗೂ ಭಾಷಾಂತರಿಸಲಾಗುವುದು ಎಂದು ಫಾಲು ಅವರು ಹೇಳಿದ್ದಾರೆ.

2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಲು ಭಾರತ ನೀಡಿದ ಸಲಹೆಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯು ವಿಶ್ವಸಂಸ್ಥೆಯ 75ನೇ ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದ್ದು, ಘೋಷಣೆ ಮಾಡಿದೆ.

ಪ್ರಧಾನಿ ಮೋದಿ ಅವರು ಕಾಣಿಸಿಕೊಂಡಿರುವ ಗೀತೆಯ ಟ್ರ್ಯಾಕ್‌ ಅನ್ನು ಜೂನ್ 16ರಂದು ಫಲು ಮತ್ತು ಗೌರವ್ ಶಾ ಬಿಡುಗಡೆ ಮಾಡಿದರು. ವಿಶ್ವದ ಹಸಿವು ತಗ್ಗಿಸಲು ಸಿರಿಧಾನ್ಯ ಮಹತ್ವದ ಪಾತ್ರ ವಹಿಸಲಿದೆ ಎಂದು ಸಿರಿಧಾನ್ಯ ಬಳಕೆಗೆ ಈ ಮೂಲಕ ಉತ್ತೇಜನ ನೀಡಲಾಗುತ್ತಿದೆ.

ಮೋದಿ ಅವರೇ ನನಗೆ ಸಿರಿಧಾನ್ಯ ಮಹತ್ವ ಕುರಿತು ಗೀತೆ ರಚಿಸಲು ಸಲಹೆ ಮಾಡಿದ್ದರು. ಗೀತೆ ರಚನೆಗಾಗಿ ನೀವು ನೆರವಾಗಿ ಎಂದು ಕೇಳಿಕೊಂಡೆ. ಪ್ರಧಾನಿ ಮೋದಿ ಅದಕ್ಕೆ ಸಮ್ಮತಿಸಿದರು. ಇದು, ನನಗೆ ಸಿಕ್ಕ ಅತ್ಯುತ್ತಮ ಅವಕಾಶ’ ಎಂದು ಫಲು ಸಂತಸ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!