ದೇಶ

ಜಮ್ಮು ಮತ್ತು ಕಾಶ್ಮೀರ: ಬಂಡೆಗಳ ಕೆಳಗೆ ಅವಿತಿಟ್ಟಿದ್ದ ತುಕ್ಕು ಹಿಡಿದ ಸ್ಫೋಟಕ ವಸ್ತುಗಳ ವಶ

Ramyashree GN

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬಂಡೆಗಳ ಕೆಳಗೆ ಭದ್ರತಾ ಪಡೆಗಳು 11 ಆರ್‌ಪಿಜಿ ರೌಂಡ್‌ಗಳು ಮತ್ತು ಗ್ರೆನೇಡ್‌ಗಳು ಸೇರಿದಂತೆ ದೊಡ್ಡ ಪ್ರಮಾಣದ ತುಕ್ಕು ಹಿಡಿದ ಸ್ಫೋಟಕ ವಸ್ತುಗಳನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಸೆರಿ ಚೋವಾನಾ ಅರಣ್ಯದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಹಲವಾರು ಗ್ರೆನೇಡ್‌ಗಳನ್ನು ಒಳಗೊಂಡಿರುವ ಸ್ಫೋಟಕ ವಸ್ತುಗಳನ್ನು ಬಂಡೆಗಳ ಕೆಳಗೆ ಮರೆಮಾಡಲಾಗಿದೆ. ಎರಡು ದಶಕಗಳ ಹಿಂದೆ ಭಯೋತ್ಪಾದಕರು ಅಲ್ಲಿ ಇರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬ್ ನಿಷ್ಕ್ರಿಯ ದಳದ ತಜ್ಞರೊಂದಿಗೆ ಭದ್ರತಾ ಪಡೆಗಳು ಸುಮಾರು 50 ಸಂಖ್ಯೆಯ ಎಲ್ಲಾ ಸ್ಫೋಟಕ ವಸ್ತುಗಳನ್ನು ನಾಶಪಡಿಸಿವೆ ಎಂದು ಅವರು ಹೇಳಿದರು.
 

SCROLL FOR NEXT