ದೇಶ

ರಾಜ್ಯಪಾಲರಿಂದ ಏಕಪಕ್ಷೀಯವಾಗಿ ಬಂಗಾಳ ಸ್ಥಾಪನಾ ದಿನಾಚರಣೆ ಘೋಷಣೆ: ಮಮತಾಗೆ ಶಾಕ್!

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲರು ರಾಜ್ಯದ ಸ್ಥಾಪನಾ ದಿನಾಚರಣೆಯನ್ನು ಏಕಪಕ್ಷೀಯವಾಗಿ ಘೋಷಣೆ ಮಾಡಿರುವುದಕ್ಕೆ ಮಮತಾ ಬ್ಯಾನರ್ಜಿ ಅಘಾತ ವ್ಯಕ್ತಪಡಿಸಿದ್ದಾರೆ.  

ಜೂ.20 ರಂದು ಬಂಗಾಳ ರಾಜ್ಯ ಸ್ಥಾಪನಾ ದಿನಾಚರಣೆ ನಡೆಯಲಿದ್ದು, ಇದನ್ನು ರಾಜ್ಯಪಾಲ ಸಿವಿ ಆನಂದ ಬೋಸ್ ಘೋಷಿಸಿದ್ದರು. ಬಂಗಾಳದ ವಿಭಜನೆಯಿಂದ ಇಲ್ಲಿನ ಜನತೆಗೆ ಎಷ್ಟು ನೋವಾಗಿತ್ತೆಂದರೆ ಸ್ವಾತಂತ್ರ್ಯ ಬಂದ ನಂತರವೂ ಸಹ ರಾಜ್ಯದಲ್ಲಿ ರಾಜ್ಯ ಸ್ಥಾಪನಾ ದಿನವನ್ನು ಯಾರೂ ಆಚರಿಸಿಲ್ಲ ಎಂದು ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ, "ನೀವು ಯಾವುದನ್ನು ರಾಜ್ಯ ಸಂಸ್ಥಾಪನಾ ದಿನ ಎಂದು ಹೇಳುತ್ತಿದ್ದೀರೋ ಆ ದಿನವನ್ನು ಆಚರಿಸಲು ಜೂ.20 ರಂದು ಕೋಲ್ಕತ್ತಾದಲ್ಲಿನ ರಾಜಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ನಿರ್ಧರಿಸಿರುವುದನ್ನು ಕೇಳಿ ನನಗೆ ಅಘಾತ ಉಂಟಾಗಿದೆ" ಎಂದು ಹೇಳಿದ್ದಾರೆ.

ಹಿಂದಿನ ದಿನದ ದೂರವಾಣಿ ಚರ್ಚೆಯ ಸಂದರ್ಭದಲ್ಲಿ, ಬೋಸ್ ಅವರು "ಏಕಪಕ್ಷೀಯ ಮತ್ತು ಸಮಾಲೋಚನೆಯಿಲ್ಲದ ನಿರ್ಧಾರ" ವನ್ನು ರಾಜ್ಯದ ಸಂಸ್ಥಾಪನಾ ದಿನವೆಂದು ಘೋಷಿಸಲು ಸಮರ್ಥನೀಯವಲ್ಲ ಎಂದು ಒಪ್ಪಿಕೊಂಡಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

1947 ರಲ್ಲಿ ಅವಿಭಜಿತ ಬಂಗಾಳ ರಾಜ್ಯವನ್ನು ಇಬ್ಭಾಗ ಮಾಡಿ ಪಶ್ಚಿಮ ಬಂಗಾಳವನ್ನಾಗಿ ಮಾಡಲಾಯಿತು ಇದು ಅತ್ಯಂತ ನೋವಿನ ಹಾಗೂ ಆಘಾತಕಾರಿ ಪ್ರಕ್ರಿಯೆಯಾಗಿತ್ತು ಎಂದು ಬ್ಯಾನರ್ಜಿ ಹೇಳಿದ್ದಾರೆ.

SCROLL FOR NEXT