ಜೋ ಬೈಡನ್-ಪ್ರಧಾನಿ ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಜೋ ಬೈಡನ್ ಜೊತೆ ಮಾತುಕತೆಯಲ್ಲಿ ರಕ್ಷಣೆ, ತಾಂತ್ರಿಕ ಒಪ್ಪಂದಗಳಿಗೆ ಒತ್ತು

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸಕ್ಕಾಗಿ ಇಂದು ಮಂಗಳವಾರ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ಅಮೆರಿಕನ್ ತಂಡವು ಪ್ರಧಾನಿಯವರನ್ನು ಸ್ವಾಗತಿಸಲಿದೆ.

ನವದೆಹಲಿ/ವಾಷಿಂಗ್ಟನ್ ಡಿಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸಕ್ಕಾಗಿ ಇಂದು ಮಂಗಳವಾರ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ಅಮೆರಿಕನ್ ತಂಡವು ಪ್ರಧಾನಿಯವರನ್ನು ಸ್ವಾಗತಿಸಲಿದೆ.

ಭೇಟಿಯ ಉದ್ದೇಶ: ಜೂನ್ 21 ರಿಂದ ಪ್ರಾರಂಭವಾಗುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುಎಸ್ ಭೇಟಿಯ ಸಮಯದಲ್ಲಿ ರಕ್ಷಣಾ ಸಹಕಾರವನ್ನು ಹೆಚ್ಚಿಸುವುದು, ಸಹ-ಉತ್ಪಾದನೆ, ಸಹ-ಅಭಿವೃದ್ಧಿ ಮತ್ತು ಪೂರೈಕೆ ಬದಲಾವಣೆಯನ್ನು ನಿರ್ವಹಿಸುವಲ್ಲಿ ನಿಕಟ ಪಾಲುದಾರಿಕೆಗಾಗಿ ಈ ವಲಯದ ಕೈಗಾರಿಕೆಗಳಿಗೆ ಮಾರ್ಗಸೂಚಿಯನ್ನು ಅನಾವರಣಗೊಳಿಸಲು ಉಭಯ ನಾಯಕರು ಉತ್ಸುಕರಾಗಿದ್ದಾರೆ.

ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಸುಧಾರಿಸುವುದರ ಜೊತೆಗೆ ಟೆಲಿಕಾಂ, ಬಾಹ್ಯಾಕಾಶ ಮತ್ತು ಉತ್ಪಾದನೆಯನ್ನು ಒಳಗೊಂಡಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಕಟ ಸಂಬಂಧಗಳನ್ನು ಬೆಳೆಸುವ ಕುರಿತು ಚರ್ಚೆ ಪ್ರಧಾನಿ ಮೋದಿ ಅವರು ಯುಎಸ್ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ನಡೆಸಲಿದ್ದಾರೆ.

ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅವರು ಜೂನ್ 24 ಮತ್ತು 25ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ, ಈ ಸಂದರ್ಭದಲ್ಲಿ ಅವರು 11ನೇ ಶತಮಾನದ ಮಸೀದಿ ಅಲ್-ಹಕೀಮ್ ಗೆ ಭೇಟಿ ನೀಡಲಿದ್ದಾರೆ. ಇದನ್ನು ಬೋಹ್ರಾ ಸಮುದಾಯ ನವೀಕರಿಸಿದೆ.

ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಯು ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ಪ್ರಮುಖ ಅಜೆಂಡಾಗಳಲ್ಲಿ ಒಂದಾಗಲಿದೆ ಎಂದು ವಿದೇಶಾಂಗ ಕಾರ್ಯದರ್ಶಿಗಳು ಹೇಳಿದ್ದಾರೆ.

ಇದು ಮೂಲಭೂತವಾಗಿ ರಕ್ಷಣಾ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿಯ ಎಲ್ಲಾ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಎರಡು ದೇಶಗಳ ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಗಳು ಹೇಗೆ ಉತ್ತಮವಾಗಿ ಸಹಕರಿಸಬಹುದು, ರಕ್ಷಣಾ ಉದ್ಯಮದ ಕ್ಷೇತ್ರದಲ್ಲಿ ಸರಬರಾಜು ಮಾರ್ಗಗಳು ಪರಸ್ಪರ ಹೇಗೆ ಸಂಪರ್ಕ ಸಾಧಿಸಬಹುದು ಎಂಬುದರ ಬಗ್ಗೆಯೂ ಚರ್ಚಿಸಿ ವಿಮರ್ಶೆ ಮಾಡಿಕೊಳ್ಳಲಿದೆ. 

ಇದೇ ಸಂದರ್ಭದಲ್ಲಿ ಕ್ವಾತ್ರಾ ಅವರು ರಕ್ಷಣಾ ಸಹಕಾರವನ್ನು ಅಮೆರಿಕ ಜೊತೆಗಿನ ಭಾರತದ ಸಂಬಂಧದ ಪ್ರಮುಖ ಸ್ತಂಭ ಎಂದು ಬಣ್ಣಿಸಿದರು.

ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನಗಳಂತಹ ಘಟನೆಗಳಿಂದ ಎದುರಾದ ಸವಾಲುಗಳು ಭಾರತ ಮತ್ತು ಅಮೆರಿಕ ನಾಯಕರ ಮನಸ್ಸಿನಲ್ಲಿದ್ದು ಆ ಬಗ್ಗೆ ಚರ್ಚೆ, ಮಾತುಕತೆಯಾಗಲಿದಿಯೇ ಎಂಬುದು ಕುತೂಹಲಕಾರಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT