ಭಗ್ನ ಪ್ರೇಮಿಯಿಂದ ಮಹಿಳೆ ಮೇಲೆ ಹಲ್ಲೆ 
ದೇಶ

ಪ್ರೇಯಸಿಗೆ ಹಲವು ಬಾರಿ ಇರಿದು ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೆ ಯತ್ನಿಸಿದ ಭಗ್ನ ಪ್ರೇಮಿ!

ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಗೇ ಹಾಡಹಗಲೇ ಹಲವು ಬಾರಿ ಇರಿದು ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ ಧಾರುಣ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾ: ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಗೇ ಹಾಡಹಗಲೇ ಹಲವು ಬಾರಿ ಇರಿದು ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ ಧಾರುಣ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾದ ಸರ್ವೆ ಪಾರ್ಕ್ ಪ್ರದೇಶದಲ್ಲಿ 21 ವರ್ಷದ ಯುವತಿಯನ್ನು ಆಕೆಯ ಮಾಜಿ ಪ್ರಿಯಕರ ಮನಸೋ ಇಚ್ಚೆ ಇರಿದು ರಕ್ತದ ಮಡುವಿನಲ್ಲೇ ಆಕೆ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಆಕೆಯನ್ನು ಅಟ್ಟಾಡಿಸಿಕೊಂಡು ಹೋಗಿ ಪಕ್ಕದಲ್ಲೇ ಇದ್ದ ಅಜೋಯನಗರ ಕ್ರಾಸಿಂಗ್ ಬಳಿಯ ಸಂತೋಷ್‌ಪುರದ ಕೊಳಕ್ಕೆ ಆಕೆಯನ್ನು ಎಳೆದೊಯ್ದು ಮುಳುಗಿಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ರಸ್ತೆಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಅಲ್ಲಿ ನೆರೆದಿದ್ದ ಜನರು ಮಾತ್ರ ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಾ ನಿಂತಿದ್ದಾರೆಯೇ ಹೊರತು ಯಾರೂ ಕೂಡ ಆತನನ್ನು ತಡೆಯುವ ಸಾಹಸ ಮಾಡಲಿಲ್ಲ. 

ಬಳಿಕ ಪುರ್ಬಾ ಜಾದವ್‌ಪುರ ಟ್ರಾಫಿಕ್ ಗಾರ್ಡ್ ಜೋಯ್‌ಜೀತ್ ಸಹಾ ಮಧ್ಯಪ್ರವೇಶಿಸಿ ಯುವಕನನ್ನು ತಡೆದು ಪೊಲೀಸರಿಗೆ ಒಪ್ಪಸಿದ್ದಾರೆ. ಪ್ರಸ್ತುತ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಆರೋಪಿಯು ಯುವತಿಯನ್ನು ಮಾತನಾಡಲು ಸ್ಥಳಕ್ಕೆ ಕರೆಯಿಸಿಕೊಂಡಿದ್ದಾನೆ. ಮಾತಿನ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಅದು ಜಗಳಕ್ಕೆ ತಿರುಗಿದೆ. ಇದರಿಂಕ ಆಕ್ರೋಶ ಗೊಂಡ ಯುವಕ ತಾನು ತಂದಿದ್ದ ಚಾಕು ತೆಗೆದು ಯುವತಿಗೆ ಮನಸೋ ಇಚ್ಚೆ ಇರಿದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಅವರು ಅದೇ ಪ್ರದೇಶದವರು ಎಂದು ತಿಳಿದುಬಂದಿದೆ ಮತ್ತು ಒಂದೆರಡು ತಿಂಗಳ ಹಿಂದೆ ಇಬ್ಬರಿಗೂ ಬ್ರೇಕಪ್ ಆಗುವ ಮೊದಲು ಅವರಿಬ್ಬರೂ ಪ್ರೀತಿಸುತ್ತಿದ್ದರು. ಬ್ರೇಕಪ್ ಬಳಿಕ ಆ ವ್ಯಕ್ತಿ ಅವಳನ್ನು ಭೇಟಿಯಾಗುವಂತೆ ಕೇಳಿಕೊಂಡನು. ಈ ವೇಳೆ ಮಾತನಾಡಲು ಬಂದ ಯುವತಿಗೆ ಆತ ಚಾಕು ಇರಿದ್ದು ಮಾತ್ರವಲ್ಲದೇ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಆಕೆಯನ್ನು ಮುಳುಗಿಸಲು ಕೊಳಕ್ಕೆ ಕರೆದೊಯ್ದಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿ ಸಮೀಪದ ಟ್ರಾಫಿಕ್ ಸಾರ್ಜೆಂಟ್ (ಟ್ರಾಫಿಕ್ ಪೊಲೀಸ್) ರಕ್ಷಣೆಗೆ ಬಂದರು ಮತ್ತು ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು. 

"ಆರೋಪಿಯು ತಾನು ಕಳೆದ ಮೂರು ವರ್ಷಗಳಿಂದ ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಅವಳು ಸಂಬಂಧವನ್ನು ಮುಂದುವರಿಸಲು ಬಯಸಲಿಲ್ಲ.  ಹೀಗಾಗಿ ಚಾಕುವಿನಿಂದ ಇರಿದೆ ಎಂದು ಹೇಳಿದ್ದಾನೆ. ಪ್ರಸ್ತುತ ಆತನನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT