ಪಾಟ್ನಾದ ಬಿಜೆಪಿ ಕಚೇರಿಯ ಹೊರಗೆ ರಾರಾಜಿಸುತ್ತಿರುವ ಪೋಸ್ಟರ್‌ಗಳು 
ದೇಶ

ಪಾಟ್ನಾ: ವಿರೋಧ ಪಕ್ಷಗಳ ಸಭೆಗೂ ಮುನ್ನ ಬಿಜೆಪಿಯಿಂದ 'ಪೋಸ್ಟರ್' ಅಭಿಯಾನ

ನಾಳೆ ನಡೆಯಲಿರುವ ಸಭೆಗೆ ವಿರೋಧ ಪಕ್ಷಗಳ ನಾಯಕರು ಪಾಟ್ನಾಗೆ ಆಗಮಿಸುತ್ತಿದ್ದಂತೆ, ಬಿಜೆಪಿ ಗುರುವಾರ ನಿತೀಶ್ ಕುಮಾರ್, ಲಾಲು ಪ್ರಸಾದ್, ರಾಹುಲ್ ಗಾಂಧಿ ಮತ್ತು ಇತರರನ್ನು ಗುರಿಯಾಗಿಸಿ ಅನೇಕ ಪೋಸ್ಟರ್‌ಗಳನ್ನು ಹಾಕಿದೆ.

ಪಾಟ್ನಾ: ನಾಳೆ ನಡೆಯಲಿರುವ ಸಭೆಗೆ ವಿರೋಧ ಪಕ್ಷಗಳ ನಾಯಕರು ಪಾಟ್ನಾಗೆ ಆಗಮಿಸುತ್ತಿದ್ದಂತೆ, ಬಿಜೆಪಿ ಗುರುವಾರ ನಿತೀಶ್ ಕುಮಾರ್, ಲಾಲು ಪ್ರಸಾದ್, ರಾಹುಲ್ ಗಾಂಧಿ ಮತ್ತು ಇತರರನ್ನು ಗುರಿಯಾಗಿಸಿ ಅನೇಕ ಪೋಸ್ಟರ್‌ಗಳನ್ನು ಹಾಕಿದೆ.

ರಾಜ್ಯ ರಾಜಧಾನಿಯಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಪೋಸ್ಟರ್‌ಗಳನ್ನು ಹಾಕಿದೆ ಮತ್ತು 'ಥಗ್ಸ್ ಆಫ್ ಇಂಡಿಯಾ' (ಭಾರತದ ಘಾತುಕರು) ಎಂದು ಹೆಸರಿಸಿದೆ.

ಒಂದು ಪೋಸ್ಟರ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಲಾಲು ಪ್ರಸಾದ್ ಕಡೆಗೆ ಬೆರಳು ತೋರಿಸುತ್ತಿರುವ 'ಮಿಟ್ಟಿ ಮಿ ಮಿಲ್ ಜಾಯೇಂಗೆ ಲೇಕಿನ್ ಇಂಕೆ ಸಾಥ್ ನಹಿ ಜಾಯೇಗೆ...' ಎಂಬ ಘೋಷಣೆಯೊಂದಿಗೆ ವ್ಯಂಗ್ಯಚಿತ್ರಗಳಿವೆ.

ಮತ್ತೊಂದು ಪೋಸ್ಟರ್‌ನಲ್ಲಿ, ಆರ್‌ಎಲ್‌ಡಿ ಮುಖ್ಯಸ್ಥ ಲಾಲು ಪ್ರಸಾದ್ ನಿತೀಶ್ ಕುಮಾರ್‌ಗೆ 'ಆಜಾ ಮೇರಿ ಗೋಡಿ ಮೇ ಬೈತ್ ಜಾ' ಎಂದು ಹೇಳುತ್ತಾರೆ.

ಮತ್ತೊಂದು ಪೋಸ್ಟರ್‌ನಲ್ಲಿ ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರು 'ಲೋಕತಂತ್ರ ಕಾ ಕಾಲ ಅದ್ದ್ಯಾಯ್ ವಾಪಾಸ್ ಲೋ' ಎಂಬ ಘೋಷಣೆಯೊಂದಿಗೆ ತುರ್ತು ಪರಿಸ್ಥಿತಿಯ ಫಲಕವನ್ನು ಹಿಡಿದಿದ್ದಾರೆ.

ಇನ್ನೊಂದು ಪೋಸ್ಟರ್‌ನಲ್ಲಿ ತೇಜಸ್ವಿ ಯಾದವ್ ಜೊತೆಗೆ ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿ 'ಲೋಕತಂತ್ರ ಕೋ ಬಚಾನೆ ಕೇಲಿಯೇ ಹಮಾರಾ ಅಧ್ಯಾಯ ಶುರು ಕರ್ ದೀಜಿಯೇ' ಎಂಬ ಪೋಸ್ಟರ್ ಹಿಡಿದಿರುವ ಚಿತ್ರಗಳಿವೆ.

ಜಯಪ್ರಕಾಶ್ ನಾರಾಯಣ್ ಅವರ ವಿದ್ಯಾರ್ಥಿಗಳು ಎಂದು ಹೇಳಿಕೊಂಡಿದ್ದ ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್, ಅವರನ್ನು (ಜಯಪ್ರಕಾಶ್ ನಾರಾಯಣ್) ಬಂಧಿಸಿದ ಕಾಂಗ್ರೆಸ್ ಪಕ್ಷದ ಜೊತೆ ನಿಂತಿದ್ದಾರೆ ಎಂದು ಇತರ ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!