ದೇಶ

ಜುಲೈ 13 ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ

Srinivas Rao BV

ನವದೆಹಲಿ: ಜುಲೈ 13 ರಂದು ಮಧ್ಯಾಹ್ನ 2:30 ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಘೋಷಿಸಿದೆ. 

ಚಂದ್ರನ ಕಕ್ಷೆಗೆ ಕಳಿಸಲಾಗುತ್ತಿರುವ 3 ನೇ ನೌಕೆ ಇದಾಗಿದ್ದು, 2019 ರಲ್ಲಿ ಚಂದ್ರಯಾನ-2 ಉಡಾವಣೆಯಾಗಿತ್ತು. ಕಳೆದ ಮಿಷನ್ ನಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನ್ನು ಸುಗಮವಾಗಿ ಸ್ಪರ್ಶಿಸಲು ಸಾಧ್ಯವಾಗಿರಲಿಲ್ಲ. ಚಂದ್ರಯಾನ-3 ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇಸ್ರೋ ಅಧಿಕಾರಿಗಳಿದ್ದು, ಈ ಬಾರಿಯ ಪ್ರಯೋಗದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. 

ಉಡಾವಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಚಂದ್ರಯಾನ-3 ರ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಸಂವೇದಕಗಳನ್ನು ಸುಧಾರಿಸಲಾಗಿದೆ. ವಾಹನಕ್ಕೆ ಹೆಚ್ಚಿನ ಇಂಧನವನ್ನು ಸೇರಿಸಲಾಗಿದೆ, ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ ಎಂದು ಏಳು ಹೇಳಿದರು. ಹೆಚ್ಚಿನ ಶಕ್ತಿ ಉತ್ಪಾದನೆಗಾಗಿ ದೊಡ್ಡ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮತ್ತೊಂದು ಹೆಚ್ಚುವರಿ ಸಂವೇದಕವನ್ನು ಸಹ ಸೇರಿಸಲಾಗಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ನೌಕೆಯನ್ನು ಜಿಎಸ್ಎಲ್ ವಿ ಮಾರ್ಕ್ 3 ವಾಹಕದ ಮೂಲಕ ಉಡಾವಣೆಯಾಗಲಿದೆ. ಇದಕ್ಕಾಗಿ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇಸ್ರೋ ಹೇಳಿದೆ. 

SCROLL FOR NEXT