ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನೀಲ್ ಕಮಾರ್ 
ದೇಶ

ಎಲ್ಲಾ ಪಂಚಾಯತ್ ಗಳು 'ಯುಪಿಎ ಪಾವತಿಗೆ ಶಕ್ತ' ಎಂದು ಆಗಸ್ಟ್ 15 ರಂದು ಘೋಷಣೆ: ಪಂಚಾಯತ್ ರಾಜ್ ಸಚಿವಾಲಯ

ಆಗಸ್ಟ್ 15ರಿಂದ ದೇಶದಾದ್ಯಂತ ಎಲ್ಲಾ ಪಂಚಾಯತ್‌ಗಳ ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್ ಪಾವತಿ ಬಳಸಲಿದ್ದು, ಯುಪಿಐ ಪಾವತಿಗೆ ಶಕ್ತ ಎಂದು ಘೋಷಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.

ನವದೆಹಲಿ: ಆಗಸ್ಟ್ 15 ರಿಂದ ದೇಶದಾದ್ಯಂತ ಎಲ್ಲಾ ಪಂಚಾಯತ್‌ಗಳ ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್ ಪಾವತಿ ಬಳಸಲಿದ್ದು, ಯುಪಿಐ ಪಾವತಿಗೆ ಶಕ್ತ ಎಂದು ಘೋಷಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.

ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಸಚಿವಾಲಯ, ಮುಖ್ಯಮಂತ್ರಿ, ಸಂಸದರು ಮತ್ತು ಶಾಸಕರಂತಹ ಗಣ್ಯರ ಸಮ್ಮುಖದಲ್ಲಿ 'ಯುಪಿಐ ಪಾವತಿ' ಅನುಕೂಲವಿರುವ ಪಂಚಾಯತ್‌ಗಳೆಂದು ಘೋಷಿಸಬೇಕು ಮತ್ತು ಅವುಗಳನ್ನು ಉದ್ಘಾಟಿಸಬೇಕು ಎಂದು ಸಚಿವಾಲಯ ತಿಳಿಸಿದೆ. 

ಸುಮಾರು ಶೇ. 98 ರಷ್ಟು ಪಂಚಾಯತ್ ಗಳು ಈಗಾಗಲೇ ಯುಪಿಐ ಆಧಾರಿತ ಪಾವತಿಗಳನ್ನು ಬಳಸಲು ಪ್ರಾರಂಭಿಸಿವೆ. ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (ಪಿಎಂಎಫ್‌ಎಸ್) ಮೂಲಕ ಸುಮಾರು 1.5 ಲಕ್ಷ ಕೋಟಿ ರೂ. ಪಾವತಿ ಮಾಡಲಾಗಿದೆ. ಪಂಚಾಯತ್‌ಗಳಲ್ಲಿ ಪಾವತಿಯನ್ನು ಈಗ ಡಿಜಿಟಲ್ ರೂಪದಲ್ಲಿ ಮಾಡಲಾಗುತ್ತದೆ. ಚೆಕ್ ಮತ್ತು ನಗದು ಪಾವತಿಯನ್ನು ಬಹುತೇಕ ನಿಲ್ಲಿಸಲಾಗಿದೆ ಎಂದು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಇದು ಈಗ ಬಹುತೇಕ ಸಾರ್ವತ್ರಿಕ ವ್ಯಾಪ್ತಿಯನ್ನು ಹೊಂದಿದೆ. ಜೂನ್ 30 ರಂದು ಸೇವಾ ಪೂರೈಕೆದಾರರು ಮತ್ತು ಮಾರಾಟಗಾರರೊಂದಿಗೆ ಸಭೆ ನಡೆಸುವಂತೆ ಪಂಚಾಯತ್‌ಗಳಿಗೆ ತಿಳಿಸಲಾಗಿದೆ. ಯುಪಿಐ ಪ್ಲಾಟ್‌ಫಾರ್ಮ್‌ಗಳಾದ GPay, PhonePay, Paytm, BHIM, Mobikwik, WhatsApp Pay, Amazon Pay ಮತ್ತು Bharat Pe ನಿಂದ ಸಂಪರ್ಕಿತ ವ್ಯಕ್ತಿಗಳ ವಿವರಗಳೊಂದಿಗೆ ಪಟ್ಟಿಯನ್ನು ಸಚಿವಾಲಯವು ಹಂಚಿಕೊಂಡಿದೆ. ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಜುಲೈ 15 ರೊಳಗೆ ಪಂಚಾಯತ್‌ಗಳು ಸೂಕ್ತ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಬೇಕು ಮತ್ತು ಜುಲೈ 30 ರೊಳಗೆ ಮಾರಾಟಗಾರರನ್ನು ಅಂತಿಮಗೊಳಿಸಬೇಕು.

ಡಿಜಿಟಲ್ ವಹಿವಾಟು ಸಕ್ರಿಯದಿಂದ ಭ್ರಷ್ಟಾಚಾರ ತಡೆಗೆ ಸಹಾಯ ಮಾಡುತ್ತದೆ ಎಂದು ಪಂಚಾಯತ್ ರಾಜ್ ರಾಜ್ಯ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಹೇಳಿದ್ದಾರೆ. ಬಹುತೇಕ ಪಂಚಾಯಿತಿಗಳು ಈಗ ಡಿಜಿಟಲ್ ಪಾವತಿಯನ್ನು ಬಳಸುತ್ತಿವೆ. ಇದು ಭ್ರಷ್ಟಾಚಾರವನ್ನು ತಡೆಯಲು ಸಹಾಯ ಮಾಡುತ್ತದೆ, ಯೋಜನೆಯಿಂದ ಪಾವತಿಯವರೆಗೆ ಎಲ್ಲವೂ ಡಿಜಿಟಲ್ ರೂಪದಲ್ಲಿ ನಡೆಯುತ್ತಿದೆ ಎಂದು ಪಾಟೀಲ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!