ಸಾಂಕೇತಿಕ ಚಿತ್ರ 
ದೇಶ

ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಪ್ರಧಾನಿ ಯುಸಿಸಿ ಯನ್ನು ಗೌರವಿಸಲಿ: ಉದ್ಧವ್ ಠಾಕ್ರೆ ಬಣ

ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು ಎಂದು ಹೇಳಿದೆ.

ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ಬಣ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಮಾತನಾಡಿದ್ದು, ಷರಿಯಾಗೆ ವಿರುದ್ಧವಾಗಿರುವುದೇ ಯುಸಿಸಿಯ ಆಧಾರವಾಗಿರಬಾರದು, ಯುಸಿಸಿ ಎಂದರೆ ಎಲ್ಲರಿಗೂ ಸಮಾನವಾದ ಕಾನೂನು ಮತ್ತು ನ್ಯಾಯ ಆಗಿರಬೇಕು ಎಂದು ಅಭಿಪ್ರಾಯಪಟ್ಟಿದೆ. 

ಷರಿಯಾ ಇಸ್ಲಾಮಿಕ್ ಧಾರ್ಮಿಕ ಕಾನೂನಾಗಿದ್ದು, ಕುರಾನ್ ಹಾಗೂ ಮೊಹಮ್ಮದ್ ಅವರ ಸಾಂಪ್ರದಾಯಿಕ ಬೋಧನೆಗಳನ್ನು ಆಧರಿಸಿದೆ.

ಶಿವಸೇನೆ ಉದ್ಧವ್ ಬಣದ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಶಿವಸೇನೆಯ 40 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಗೌರವಿಸಲಿ ಎಂದು ಹೇಳಿದೆ.

ಭಿವಾಂಡಿ ನಿಜಾಮ್ ಪುರ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎನ್ ಸಿಎಂಸಿ) ಯ 18 ಮಾಜಿ ಕಾರ್ಪೊರೇಟರ್ ಗಳನ್ನು, 2019 ರ ಮೇಯರ್ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಅನರ್ಹಗೊಳಿಸಿ,  6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಮಾಡಲಾಗಿದೆ. 

ಒಂದು ವೇಳೆ ಆಡಳಿತಾರೂಢ ಪಕ್ಷದ ಭ್ರಷ್ಟ ಸಚಿವರು, ಉದ್ಯಮಿಗಳು, ಜನರನ್ನು ರಕ್ಷಿಸಿ, ವಿಪಕ್ಷಗಳ ನಾಯಕರನ್ನು ಭ್ರಷ್ಟಾಚಾರ ವಿರೋಧಿ ಕಾರಣ ಇಟ್ಟುಕೊಂಡು ಹಣಿಯುವುದಾದರೆ ಅದೆಂತಹ ಕಾನೂನು? ಎಂದು ಉದ್ಧವ್ ಬಣ ಸಾಮ್ನಾದಲ್ಲಿ ಪ್ರಶ್ನಿಸಿದೆ
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!