ದೇಶ

ಈಶಾನ್ಯ ರಾಜ್ಯಗಳ ಚುನಾವಣೆ: ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಮುಂಚೂಣಿ, ಮೇಘಾಲಯದಲ್ಲಿ ಎನ್ ಪಿಪಿ ಮುನ್ನಡೆ

Sumana Upadhyaya

ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದರೆ,ಮೇಘಾಲಯದಲ್ಲಿ ಎನ್‌ಪಿಪಿ ಆರಂಭಿಕ ಮುನ್ನಡೆ ಸಾಧಿಸಿದೆ.

ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರೆಸುವ ಸಾಧ್ಯತೆಯಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಆದರೆ ಈ ಹಿಂದೆ ಎಕ್ಸಿಟ್ ಪೋಲ್‌ಗಳ ಸಮೀಕ್ಷೆ ತಪ್ಪಾಗಿದ್ದವು. 

ತ್ರಿಪುರಾದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಅವರ ಜೊತೆಗೆ ಬಿಜೆಪಿಯ ರತನ್ ಚಕ್ರವರ್ತಿ, ರತನ್ ಲಾಲ್ ನಾಥ್ ಮತ್ತು ಸುಶಾಂತ ಚೌಧರಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಸುದೀಪ್ ರಾಯ್ ಬರ್ಮನ್ ಕೂಡ ಮುನ್ನಡೆಯಲ್ಲಿದ್ದಾರೆ.

ಮೇಘಾಲಯದಲ್ಲಿ ಆಡಳಿತಾರೂಢ ಎನ್‌ಪಿಪಿಯ ಜೇಮ್ಸ್ ಪಿಕೆ ಸಂಗ್ಮಾ, ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರ ಹಿರಿಯ ಸಹೋದರ ದಾಡೆಂಗ್ರೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಟಿಎಂಸಿಯ ಜೆನಿತ್ ಸಂಗ್ಮಾ ರಂಗಸಕೋನಾದಲ್ಲಿ ಹಿಂಬಾಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಟಿಎಂಸಿ ಧೀಮಂತ ಮುಕುಲ್ ಸಂಗ್ಮಾ ಮತ್ತು ಗೃಹ ಸಚಿವ ಮತ್ತು ಯುಡಿಪಿ ಅಭ್ಯರ್ಥಿ ಲಖ್‌ಮೆನ್ ರಿಂಬುಯಿ ಇಬ್ಬರೂ ಮುನ್ನಡೆ ಸಾಧಿಸಿದ್ದಾರೆ.

ಮೇಘಾಲಯದ ಪೂರ್ವ ಶಿಲ್ಲಾಂಗ್ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಎನ್‌ಪಿಪಿ ಅಭ್ಯರ್ಥಿ ಅಂಪಾರೀನ್ ಲಿಂಗ್ಡೋ ಮುನ್ನಡೆ ಸಾಧಿಸಿದ್ದಾರೆ.

ಕಳೆದ ಅಸೆಂಬ್ಲಿಯಲ್ಲಿ ವಿರೋಧ ಪಕ್ಷವಿಲ್ಲದ ನಾಗಲ್ಯಾಂಡ್: 60 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಅಸ್ತಿತ್ವ ಹೊಂದಿರುವ ಎಲ್ಲಾ ಪಕ್ಷಗಳು ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಿದ್ದರಿಂದ ಯಾವುದೇ ವಿರೋಧವಿಲ್ಲ ಎಂಬ ವಿಶಿಷ್ಟ ಲಕ್ಷಣವನ್ನು ಹೊಂದಿದ್ದ ನಾಗಾಲ್ಯಾಂಡ್‌ನಲ್ಲಿ ಈ ಬಾರಿ ಬಿಜೆಪಿ ಮತ್ತೆ ಎನ್‌ಡಿಪಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.

2003-18ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಾಗಾ ಪೀಪಲ್ಸ್ ಫ್ರಂಟ್ (NPF), ಕೇವಲ 22 ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ವಾಸ್ತವಿಕವಾಗಿ ಸೋಲನ್ನು ಒಪ್ಪಿಕೊಂಡಿತು. ಕಳೆದ ಚುನಾವಣೆಯಲ್ಲಿ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಆದರೆ ಬಿಜೆಪಿ-ಎನ್‌ಡಿಪಿಪಿ ಸಂಯೋಜನೆಯು ಇತರರೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿತು.

ಕಳೆದ ವರ್ಷ ಅದರ 21 ಶಾಸಕರು ಎನ್‌ಡಿಪಿಪಿಗೆ ಪಕ್ಷಾಂತರಗೊಂಡಾಗ ಎನ್‌ಪಿಎಫ್ ವಿಭಜನೆಯಾಯಿತು. ನಂತರ, NPFನ್ನು ಸರ್ವಪಕ್ಷ ಮತ್ತು "ವಿರೋಧ-ಎಲ್ ಎಸ್ಎಸ್" ಸರ್ಕಾರವನ್ನಾಗಿ ಮಾಡಲು ಸರ್ಕಾರದಲ್ಲಿ ಅವಕಾಶ ಕಲ್ಪಿಸಲಾಯಿತು. ಇತ್ಯರ್ಥವಾಗದ ನಾಗಾ ರಾಜಕೀಯ ಸಮಸ್ಯೆಯನ್ನು ಒಂದೇ ಧ್ವನಿಯಲ್ಲಿ ಒಗ್ಗಟ್ಟಿನಿಂದ ಮುಂದುವರಿಸುವುದು ಇದರ ಉದ್ದೇಶವಾಗಿತ್ತು. ಈ ಬಾರಿ ಕಾಂಗ್ರೆಸ್ 23 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಶೂನ್ಯ ಸಾಧನೆ ಮಾಡಿತ್ತು.

SCROLL FOR NEXT