ದೇಶ

ವಿಶ್ವ ಬ್ಯಾಂಕ್ ನಿಂದ ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವು

Srinivas Rao BV

ನವದೆಹಲಿ: ಭಾರತ ಮತ್ತು ವಿಶ್ವ ಬ್ಯಾಂಕ್ ಪರಸ್ಪರ 500 ಮಿಲಿಯನ್ ಡಾಲರ್ ನ ಪೂರಕ ಸಾಲಗಳ ಎರಡು ಒಪ್ಪಂದಗಳಿಗೆ ಸಹಿ ಹಾಕಿವೆ. ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಒಪ್ಪಂದ ನಡೆದಿದೆ.

1 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಈ ಸಂಯೋಜಿತ ಹಣಕಾಸು ನೆರವಿನಿಂದ ಭಾರತದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ-ಎಬಿಹೆಚ್ಐಎಂ) ನ್ನು ಬೆಂಬಲಿಸಲಿದೆ. ದೇಶದಾದ್ಯಂತ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಉದ್ದೇಶ ಹೊಂದಿದೆ. 

ರಾಷ್ಟ್ರೀಯ ಮಟ್ಟದ ಜೊತೆಗೆ, ಆಂಧ್ರಪ್ರದೇಶ, ಕೇರಳ, ಮೇಘಾಲಯ, ಒಡಿಶಾ, ಪಂಜಾಬ್, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯಗಳಲ್ಲಿ ಆರೋಗ್ಯ ಸೇವೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಒಪ್ಪಂದಕ್ಕೆ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರಾ ಮತ್ತು ವಿಶ್ವಬ್ಯಾಂಕ್ ಭಾರತದ ನಿರ್ದೇಶಕ ಆಗಸ್ಟೆ ತಾನೋ ಕೌಮ್ ಸಹಿ ಹಾಕಿದ್ದಾರೆ.

ಕೋವಿಡ್ ಪ್ಯಾಂಡಮಿಕ್ ಸಾಂಕ್ರಾಮಿಕ ಸನ್ನದ್ಧತೆಯ ತುರ್ತು ಅಗತ್ಯತೆ ಮತ್ತು ಪ್ರಪಂಚದಾದ್ಯಂತ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಸನ್ನಿವೇಶವನ್ನುಂಟುಮಾಡಿದೆ ಎಂದು ವಿಶ್ವಬ್ಯಾಂಕ್ ಭಾರತದ ನಿರ್ದೇಶಕ ಆಗಸ್ಟೆ ತಾನೋ ಕೌಮ್ ಹೇಳಿದ್ದಾರೆ. ಕಾಲಕ್ರಮೇಣ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಕಾರ್ಯಕ್ಷಮತೆ ಸುಧಾರಿಸಿದೆ. 

SCROLL FOR NEXT