ದೇಶ

'ಅನ್ಯಾಯ'ದ ವಿರುದ್ಧ ಹೋರಾಡಲು ಹೊಸ ವೇದಿಕೆ ಘೋಷಿಸಿದ ಕಪಿಲ್ ಸಿಬಲ್

Lingaraj Badiger

ನವದೆಹಲಿ: ನಾಗರಿಕರ ವಿರುದ್ಧ ಕೆಲಸ ಮಾಡುವ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದು ಆರೋಪಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು, ದೇಶದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಶನಿವಾರ ಇನ್ಸಾಫ್ ಎಂಬ ಹೊಸ ವೇದಿಕೆ ಘೋಷಿಸಿದ್ದಾರೆ.

ಮಾರ್ಚ್ 11 ರಂದು ಜಂತರ್ ಮಂತರ್‌ನಲ್ಲಿ ಹೊಸ ವೇದಿಕೆಯ ಸಾರ್ವಜನಿಕ ಸಭೆ ನಡೆಸುವುದಾಗಿ ಕಪಿಲ್ ಸಿಬಲ್, ಇದು ದೇಶದ ಹೊಸ ದೃಷ್ಟಿಕೋನವನ್ನು ಮುಂದಿಡಲಿದೆ ಎಂದಿದ್ದಾರೆ.

ಮಾರ್ಚ್ 11 ರಂದು ಜಂತರ್ ಮಂತರ್‌ನಲ್ಲಿ ನಡೆಯುವ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಮತ್ತು ಸಾಮಾನ್ಯ ಜನರು ಸೇರಿದಂತೆ ಎಲ್ಲರಿಗೂ ಭಾಗವಹಿಸಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

"ಈ ವೇದಿಕೆ ಭಾರತದ ಹೊಸ ದೃಷ್ಟಿಕೋನ, ಸಕಾರಾತ್ಮಕ ಕಾರ್ಯಸೂಚಿಯನ್ನು ನೀಡುತ್ತದೆ. ಈ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕಾಗಿ ಅಲ್ಲ. ಅವರನ್ನು ಸುಧಾರಿಸುವುದಕ್ಕಾಗಿ" ಎಂದು ತಮ್ಮ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಭಾರತದ ಮೂಲೆ ಮೂಲೆಯಲ್ಲೂ ಅನ್ಯಾಯ ನಡೆಯುತ್ತಿದೆ ಎಂದು ಆರೋಪಿಸಿದ ಸಿಬಲ್, ನಾಗರಿಕರು, ಸಂಸ್ಥೆಗಳು, ರಾಜಕೀಯ ಪ್ರತಿಪಕ್ಷಗಳು, ಪತ್ರಕರ್ತರು, ಶಿಕ್ಷಕರು ಮತ್ತು ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೂ ಅನ್ಯಾಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

"ನಾವು 'ಇನ್ಸಾಫ್ ಕೆ ಸಿಪಾಹಿ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದೇವೆ. ಅಲ್ಲಿ ಯಾರು ಬೇಕಾದರೂ ನೋಂದಾಯಿಸಿಕೊಳ್ಳಬಹುದು. ಇದು ರಾಷ್ಟ್ರೀಯ ಮಟ್ಟದ ವೇದಿಕೆಯಾಗಲಿದೆ. ಇಲ್ಲಿ ವಕೀಲರು ಮುಂಚೂಣಿಯಲ್ಲಿರುತ್ತಾರೆ" ಎಂದು ಮಾಜಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

SCROLL FOR NEXT