ದೇಶ

ಗುಜರಾತ್ ಗೆ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್; ಹೋಲಿ ಸಂಭ್ರಮಾಚರಣೆಯಲ್ಲಿ ಭಾಗಿ, ಸಬರ್ಮತಿ ಆಶ್ರಮಕ್ಕೆ ಭೇಟಿ

Srinivas Rao BV

ಗಾಂಧಿನಗರ: ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಮಾ.08 ರಂದು ಗುಜರಾತ್ ನ ರಾಜಧಾನಿ ಗಾಂಧಿನಗರಕ್ಕೆ ಭೇಟಿ ನೀಡಿದ್ದು ರಾಜಭವನದಲ್ಲಿ ನಡೆದ ಹೋಲಿ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದರು.

ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಆಲ್ಬನೀಸ್ ಅವರನ್ನು ಗುಜರಾತ್ ನ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಹಾಗೂ ಸಿಎಂ ಭೂಪೇಂದ್ರ ಪಟೇಲ್ ಅವರು ರಾಜಭವನದಲ್ಲಿ ಹೋಲಿ ಬಣ್ಣ ಹಚ್ಚುವ ಮೂಲಕ  ಸ್ವಾಗತಿಸಿದರು.

ಆಸ್ಟ್ರೇಲಿಯಾ ಪ್ರಧಾನಿಗೆ ಆತಿಥ್ಯದ ಭಾಗವಾಗಿ ರಾಜ್ಯಪಾಲರು ಹೋಲಿ ಸಂಭ್ರಮಾಚರಣೆಯನ್ನು ಆಯೋಜಿಸಿದ್ದರು. 

ಆಸ್ಟ್ರೇಲಿಯಾ ಪ್ರಧಾನಿ ಹೋಲಿ ಆಚರಣೆಯಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ಟ್ವೀಟ್ ಮಾಡಿದ್ದು, "ಭಾರತದ ಅಹಮದಾಬಾದ್‌ನಲ್ಲಿ ಹೋಳಿ ಹಬ್ಬವನ್ನು ಆಚರಿಸಿದ್ದು, ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯದ ಮೂಲಕ ಹೊಸತನ ಹೋಳಿಯ ಸಂದೇಶವಾಗಿದ್ದು ನಮ್ಮೆಲ್ಲರಿಗೂ ನಿರಂತರ ಜ್ಞಾಪಕದಲ್ಲಿರುತ್ತದೆ." ನಿಮ್ಮ ನಂಬಿಕೆಗಳು ಏನೇ ಆಗಿರಲಿ, ನೀವು ಎಲ್ಲಿಂದಲೇ ಬಂದಿರಿ, ನಮ್ಮನ್ನು ಒಟ್ಟುಗೂಡಿಸುವುದನ್ನು ನಾವು ಗೌರವಿಸುತ್ತೇವೆ ಹಾಗೂ ಸಂಭ್ರಮಿಸುತ್ತೇವೆ ಎಂದು ಆಸ್ಟ್ರೆಲಿಯಾ ಪ್ರಧಾನಿ ಹೇಳಿದ್ದಾರೆ. 

ಪ್ರಧಾನಿಯಾಗಿ ಭಾರತಕ್ಕೆ ಇದು ನನ್ನ ಮೊದಲ ಭೇಟಿಯಾಗಿದೆ. ಆದರೆ ಯುವಕನಾಗಿದ್ದಾಗ 1991 ರಲ್ಲಿ ಭಾರತಕ್ಕೆ ಬಂದು ಇಲ್ಲಿ 6 ವಾರಗಳ ಕಾಲ ಇದ್ದೆ ಎಂದು ಆಲ್ಬನೀಸ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಭೇಟಿ, ಅಪರೂಪದ ಭೂ ಖನಿಜ ವಲಯಕ್ಕೆ ಸಂಬಂಧಿಸಿದ ಒಪ್ಪಂದ ಸಾಧ್ಯತೆ
 
ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಆಲ್ಬನೀಸ್ ಧನ್ಯವಾದ ತಿಳಿಸಿದ್ದಾರೆ. ಉಭಯ ಪ್ರಧಾನಿಗಳೂ ಆಸ್ಟ್ರೇಲಿಯಾ- ಭಾರತ ನಡುವಿನ ಟೆಸ್ಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ. 

ಇನ್ನು ಸಂಜೆ ವೇಳೆಗೆ ಆಲ್ಬನೀಸ್ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಗಾಂಧಿಯ ಮೌಲ್ಯಗಳು ಜಗತ್ತನ್ನು ಪ್ರೇರೇಪಿಸುತ್ತಿವೆ' ಎಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ.

SCROLL FOR NEXT