ಬೋನಿ ಸೇನ್‌ಗುಪ್ತಾ ಅಲಿಯಾಸ್ ಅನುಪ್ರಿಯೋ ಸೇನ್‌ಗುಪ್ತಾ 
ದೇಶ

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ; ಪ್ರಕರಣದ ಸಂಬಂಧ ಟಾಲಿವುಡ್ ನಟನಿಗೆ ಇ.ಡಿ ಸಮನ್ಸ್

ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ಬಂಗಾಳಿ ಸಿನಿಮಾ ಲಿಂಕ್ ಅನ್ನು ಕೇಂದ್ರೀಕರಿಸುವ ಎರಡನೇ ಹಂತದ ತನಿಖೆಯನ್ನು ಪ್ರಾರಂಭಿಸುತ್ತಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ಬಂಗಾಳಿ ಸಿನಿಮಾ ಲಿಂಕ್ ಅನ್ನು ಕೇಂದ್ರೀಕರಿಸುವ ಎರಡನೇ ಹಂತದ ತನಿಖೆಯನ್ನು ಪ್ರಾರಂಭಿಸುತ್ತಿದೆ.

ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ಬೋನಿ ಸೇನ್‌ಗುಪ್ತಾ ಅಲಿಯಾಸ್ ಅನುಪ್ರಿಯೋ ಸೇನ್‌ಗುಪ್ತಾ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆ ಸಮನ್ಸ್ ನೀಡಿದೆ. ಪ್ರಸಕ್ತ ವಾರದಲ್ಲಿ ಕೋಲ್ಕತ್ತಾದ ಉತ್ತರ ಹೊರವಲಯದಲ್ಲಿರುವ ಸಾಲ್ಟ್ ಲೇಕ್‌ನಲ್ಲಿರುವ ಕೇಂದ್ರ ಸರ್ಕಾರಿ ಕಚೇರಿ (ಸಿಜಿಒ) ಸಂಕೀರ್ಣದಲ್ಲಿರುವ ಏಜೆನ್ಸಿಯ ಕಚೇರಿಗೆ ಹಾಜರಾಗುವುದಾಗಿ ನಟ ಇ.ಡಿಗೆ ಖಚಿತಪಡಿಸಿದ್ದಾರೆ.

ಈ ಸಂಬಂಧ ಸೇನ್‌ಗುಪ್ತಾ ಅವರನ್ನು ಸಂಪರ್ಕಿಸಲು ಪುನರಾವರ್ತಿತ ಪ್ರಯತ್ನಗಳ ಹೊರತಾಗಿಯೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.

ಬಂಧಿತ ಯುವ ತೃಣಮೂಲ ಕಾಂಗ್ರೆಸ್ ನಾಯಕ ಕುಂತಲ್ ಘೋಷ್ ಅವರ ದಾಖಲೆಗಳ ಕ್ರಾಸ್ ಚೆಕ್ ನಂತರ ಈ ನಟನ ಹೆಸರು ಹೊರಹೊಮ್ಮಿದೆ ಎಂದು ಮೂಲಗಳು ತಿಳಿಸಿವೆ. ಘೋಷ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸೇನ್‌ಗುಪ್ತಾ ಮತ್ತು ಘೋಷ್ ನಡುವೆ ಯಾವುದೇ ಹಣಕಾಸಿನ ವಹಿವಾಟು ನಡೆದಿದೆಯೇ ಮತ್ತು ಹೌದು ಎಂದಾದರೆ ಯಾವ ಉದ್ದೇಶಕ್ಕಾಗಿ ಎನ್ನುವ ಬಗ್ಗೆ ಅವರನ್ನು ಪ್ರಶ್ನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಉತ್ತರ 24 ಪರಗಣ ಜಿಲ್ಲೆಯ ಬರಾಕ್‌ಪೋರ್ ವಿಧಾನಸಭೆ ಕ್ಷೇತ್ರದಿಂದ ಜನಪ್ರಿಯ ಚಲನಚಿತ್ರ ನಿರ್ದೇಶಕ ಮತ್ತು ಸದ್ಯದ ತೃಣಮೂಲ ಕಾಂಗ್ರೆಸ್ ಶಾಸಕ ರಾಜ್ ಚಕ್ರವರ್ತಿ ನಿರ್ದೇಶಿಸಿದ ಬಂಗಾಳಿ ಚಲನಚಿತ್ರ 'ಬೋರ್‌ಬಾದ್' ಮೂಲಕ ಸೇನ್‌ಗುಪ್ತಾ ನಟನೆಗೆ ಪದಾರ್ಪಣೆ ಮಾಡಿದರು. ಸೇನ್‌ಗುಪ್ತಾ ಅವರು ಟಾಲಿವುಡ್‌ನ ಹಿಂದಿನ ಜನಪ್ರಿಯ ನಟ-ನಿರ್ದೇಶಕ ಸುಖೇನ್ ದಾಸ್ ಅವರ ಮೊಮ್ಮಗ.

ಈಗಾಗಲೇ, ಘೋಷ್ ಒಡೆತನದ ನೊವ್ಕಥಾ ಇನಿಶಿಯೇಟಿವ್ ಎಂದು ಹೆಸರಿಸಲಾದ ಪ್ರೊಡಕ್ಷನ್ ಹೌಸ್ ಇತ್ತೀಚೆಗೆ ಮ್ಯೂಸಿಕ್ ವಿಡಿಯೋಗಳು ಮತ್ತು ವೆಬ್-ಸರಣಿಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಆತನಿಂದ ವಶಪಡಿಸಿಕೊಂಡ ವಿವಿಧ ದಾಖಲೆಗಳನ್ನು ಪರಿಶೀಲಿಸಿದಾಗ, ಹಗರಣದ ಆದಾಯದ ಒಂದು ಭಾಗವನ್ನು ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಸುಳಿವು ಇ.ಡಿಗೆ ಸಿಕ್ಕಿದೆ ಮತ್ತು ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಘೋಷ್ ಅವರನ್ನು ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT