ದೇಶ

ವಿದೇಶದಲ್ಲಿ ಮಗುವಿನಂತೆ ರಾಹುಲ್ ಕಣ್ಣೀರು: ಸಿಎಂ ಶಿವರಾಜ್ ಸಿಂಗ್ ಚೌಹಾಣ್

Nagaraja AB

ಭೂಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕತ್ವದ ಬಗ್ಗೆ ಕರುಣೆ ಉಂಟಾಗುತ್ತಿದೆ ಎಂದರು.

ದೇಶದಲ್ಲಿ ರಾಹುಲ್ ಗಾಂಧಿ ಮಾತನನ್ನು ಯಾರೂ ಕೇಳುವುದಿಲ್ಲ, ಆದ್ದರಿಂದ ವಿದೇಶದಲ್ಲಿ ಮಾತನಾಡುತ್ತಿದ್ದಾರೆ. ಅವರು ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತಹ ಬಾಲಿಶ ಮಾತುಗಳನ್ನು ಆಡಿದ್ದು, ಮಗುವಿನಂತೆ ಅಳುತ್ತಾರೆ. ತನಗೆ ಇದು ಮತ್ತು ಅದಕ್ಕೆ ಅವಕಾಶವಿಲ್ಲ ಎಂದು ದೂರುತ್ತಾರೆ. ಏನನ್ನೂ ಹೇಳಬಯಸುತ್ತಿರೋ ಅದನ್ನು ದೇಶದ ಜನರಲ್ಲಿ ಹೇಳಿ ಎಂದು ಅವರು ಹೇಳಿದರು.

2014 ರ ಮೊದಲು ನಾನು ವಿದೇಶಕ್ಕೆ ಹೋದಾಗ, ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಾಧನೆಯಲ್ಲಿ ಹಿಂದಿರುವುದಾಗಿ ಕೇಳಲಾಗಿತ್ತು. ಆದರೆ, ನಮ್ಮ ಪ್ರಧಾನಿ ಎಂದಿಗೂ ಸಾಧನೆಯಲ್ಲಿ ಹಿಂದೆ ಬಿದ್ದಿಲ್ಲ, ಅವರು ಭಾರತದ ಪ್ರಧಾನಿ, ಕಾಂಗ್ರೆಸ್‌ನವರಲ್ಲ ಎಂದು ಹೇಳಿದ್ದೆ. ಆದರೆ ಈಗ ಈ ರೀತಿ ಅಳುತ್ತಿರುವುದು ಕಾಂಗ್ರೆಸ್ ನಾಯಕತ್ವದ ಸೋಲು, ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ, ನನಗೆ ಕರುಣೆ ಉಂಟಾಗುತ್ತಿದೆ ಎಂದರು.

ಮಾಜಿ ಸಿಎಂ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥ ಕಮಲ್‌ನಾಥ್‌ರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಚೌಹಾಣ್, ಕಳೆದ ಚುನಾವಣೆಯಲ್ಲೂ ನಾಥ್ ಸುಳ್ಳಿನ ಮೇಲೆ ಅವಲಂಬಿತರಾಗಿದ್ದರು, ಅವರು ನೀಡಿದ ಭರವಸೆಯನ್ನು ಈಡೇರಿಸಲಿಲ್ಲ ಮತ್ತು ಈಗ ಮತ್ತೆ ಹೊಸ ಭರವಸೆಯೊಂದಿಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

SCROLL FOR NEXT