ದೇಶ

ಖಲೀಸ್ಥಾನ ಪರವಾಗಿದ್ದ 6 ಯೂಟ್ಯೂಬ್ ಚಾನಲ್ ಗಳಿಗೆ ಕೇಂದ್ರ ಸರ್ಕಾರದ ನಿರ್ಬಂಧ

Srinivas Rao BV

ನವದೆಹಲಿ: ಖಲಿಸ್ಥಾನ ಸಂಘಟನೆಯ ಪರವಾಗಿದ್ದ 6 ಯೂಟ್ಯೂಬ್ ಚಾನಲ್ ಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ. 

ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 6-8 ಯೂಟ್ಯೂಬ್ ಚಾನಲ್ ಗಳನ್ನು ನಿರ್ಬಂಧಿಸಲಾಗಿದೆ ಈ ಚಾನಲ್ ಗಳು ವಿದೇಶಗಳಿಂದ ಕಾರ್ಯನಿರ್ವಹಣೆಯಾಗುತ್ತಿತ್ತು ಕಳೆದ 10 ದಿನಗಳಿಂದ ಪ್ರಸಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಂಜಾಬಿ ಭಾಷೆಯಲ್ಲಿನ ಕಂಟೆಂಟ್ ಮೂಲಕ ಗಡಿ ರಾಜ್ಯದಲ್ಲಿ ತೊಂದರೆಯನ್ನು ಉಂಟುಮಾಡಲು ಉದ್ದೇಶಿಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ. 

ತೀವ್ರಗಾಮಿ ಹಾಗೂ ಖಲಿಸ್ಥಾನದ ಬೆಂಬಲಿಗ  ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ತಮ್ಮ ಸಹಾಯಕರಲ್ಲಿ ಒಬ್ಬನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲು ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಅಜ್ನಾಲಾದಲ್ಲಿ ಪೊಲೀಸ್ ಠಾಣೆಗೆ ನುಗ್ಗಿದ್ದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. 

SCROLL FOR NEXT