ಶಾಲಿಜಾ ಧಾಮಿ 
ದೇಶ

ವಾಯುಪಡೆಯ ಯುದ್ಧ ಘಟಕದ ಮೊದಲ ಮಹಿಳಾ ಗ್ರೂಪ್ ಕ್ಯಾಪ್ಟನ್ ಆಗಿ ಶಾಲಿಜಾ ಧಾಮಿ ನೇಮಕ!

ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ

ನವದೆಹಲಿ: ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರನ್ನು ಪಶ್ಚಿಮ ವಲಯದಲ್ಲಿನ ಮುಂಚೂಣಿ ಯುದ್ಧ ಘಟಕದ ಕಮಾಂಡರ್‌ ಆಗಿ ನೇಮಕ ಮಾಡಲಾಗಿದೆ. ಆ ಮೂಲಕ ಐಎಎಫ್‌ನ ಯುದ್ಧ ಘಟಕವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎನ್ನುವ ಹಿರಿಮೆಗೆ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಪಾತ್ರರಾಗಿದ್ದಾರೆ.

2003ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು ಐಎಎಫ್ ಸೇರ್ಪಡೆಯಾಗಿದ್ದರು. ಇವರು ಪಶ್ಚಿಮ ವಲಯದ ಹೆಲಿಕಾಪ್ಟರ್ ಘಟಕವೊಂದರ ಫ್ಲೈಟ್ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಗ್ರೂಪ್ ಕ್ಯಾಪ್ಟನ್ ಹುದ್ದೆಯು ಸೇನೆಯಲ್ಲಿನ ಕರ್ನಲ್ ಹುದ್ದೆಗೆ ಸರಿಸಮನಾಗಿದೆ.

ಗ್ರೂಪ್ ಕ್ಯಾಪ್ಟನ್ (ಸೇನೆಯಲ್ಲಿ ಕರ್ನಲ್‌ಗೆ ಸಮಾನ) ಧಾಮಿ ಅವರು 2003 ರಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿ ನೇಮಕಗೊಂಡರು. 2,800 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ.

ವಾಯುಪಡೆಯಲ್ಲಿ ಹಲವು ಪ್ರಥಮಗಳ ಕೀರ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿರುವ ಶಾಲಿಜಾ, 15ಕ್ಕೂ ಹೆಚ್ಚು ವರ್ಷಗಳ ಅನುಭವಗಳನ್ನು ಐಎಎಫ್‌ನಲ್ಲಿ ಪಡೆದಿದ್ದಾರೆ. ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದ ಇವರು 2003ರಲ್ಲಿ ಎಚ್‌ಎಎಲ್ ಎಚ್‌ಪಿಟಿ-32 ದೀಪಕ್ ಅನ್ನು ಮೊದಲ ಬಾರಿಗೆ ಏಕಾಂಗಿಯಾಗಿ ಹಾರಿಸಿದ್ದರು. 2003ರಲ್ಲಿ ಐಎಎಫ್‌ನಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡು 2005ರಲ್ಲಿ ಫ್ಲೈಟ್ ಲೆಫ್ಟಿನೆಂಟ್ ಹಾಗೂ 2009ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಬಡ್ತಿ ಪಡೆದಿದ್ದರು.

ಜುಲೈ 2016 ರಲ್ಲಿ ಅವನಿ ಚತುರ್ವೇದಿ, ಭಾವನಾ ಕಾಂತ್ ಮತ್ತು ಮೋಹನಾ ಸಿಂಗ್ ಎಂಬ ಮೂವರು ಮಹಿಳಾ ಅಧಿಕಾರಿಗಳು ಯುದ್ಧವಿಮಾನಕ್ಕೆ ಸೇರ್ಪಡೆಯಾಗಿದ್ದರು. 2018 ರಲ್ಲಿ, ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ MiG-21 ಬೈಸನ್  ಹಾರಿಸುವ ಮೂಲಕ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಮೊದಲ ಭಾರತೀಯ ಮಹಿಳಾ ಪೈಲಟ್ ಆದರು.

ಪ್ರಸ್ತುತ, ಐಎಎಫ್‌ನಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ, ಇದು ವಿಶೇಷ ಪಡೆಗಳ ಘಟಕ ಗರುಡ್ ಸೇರಿದಂತೆ ತನ್ನ ಎಲ್ಲಾ ಶಾಖೆಗಳಲ್ಲೂ ಮಹಿಳಾ ಅಧಇಕಾರಿಗಳಿದ್ದಾರೆ.  ಮಹಿಳಾ ಅಧಿಕಾರಿಗಳು ಸುಖೋಯ್ ಫೈಟರ್‌ಗಳಲ್ಲಿ ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು C-130j ಹರ್ಕ್ಯುಲಸ್, C-17 ಕಾರ್ಯತಂತ್ರದ ಸಾರಿಗೆ ವಿಮಾನದ ವಿಶೇಷ ಕಾರ್ಯಾಚರಣೆ ಸ್ಕ್ವಾಡ್ರನ್‌ಗಳನ್ನು ಹಾರಿಸುತ್ತಿದ್ದಾರೆ.

ಐಎಎಫ್ ಇತಿಹಾಸದಲ್ಲಿ ಯಾವುದೇ ಮುಂಚೂಣಿ ಯುದ್ಧ ಘಟಕದ ಅಧಿಕಾರವನ್ನು ಈವರೆಗೂ ಮಹಿಳಾ ಅಧಿಕಾರಿಗೆ ನೀಡಿದ ಉದಾಹರಣೆಯೇ ಇಲ್ಲ. ಆದರೆ ಈ ತಿಂಗಳ ಆರಂಭದಲ್ಲಿ ಸೇನೆಯು ಮಹಿಳಾ ಅಧಿಕಾರಿಗಳನ್ನು ಇದೇ ಮೊದಲ ಬಾರಿಗೆ ವೈದ್ಯಕೀಯ ತಂಡದ ಆಚೆಗೆ ಕಮಾಂಡ್ ಕಾರ್ಯಗಳಿಗೆ ನಿಯೋಜಿಸುವುದನ್ನು ಆರಂಭಿಸಿದೆ

ಮುಂಚೂಣಿ ನೆಲೆ ಸೇರಿದಂತೆ ಕಾರ್ಯಾಚರಣೆ ನಡೆಸುವ ಪ್ರದೇಶಗಳಲ್ಲಿನ ಸುಮಾರು 50 ಘಟಕಗಳ ನೇತೃತ್ವವನ್ನು ಶಾಲಿಜಾ ಧಾಮಿ ಅವರು ವಹಿಸಿಕೊಳ್ಳುತ್ತಿದ್ದಾರೆ. ಇದು ಉತ್ತರ ಮತ್ತು ಪೂರ್ವ ಎರಡೂ ಕಮಾಂಡ್‌ಗಳಲ್ಲಿ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT