ದೇಶ

ವೆಡ್ಡಿಂಗ್ ಕಾರ್ಡ್ ವೈರಲ್; ಪೊಲೀಸರಿಗೆ ಹೆದರಿ ತರಾತುರಿಯಲ್ಲಿ ಇಬ್ಬರನ್ನು ವಿವಾಹವಾದ ಬುಡಕಟ್ಟು ಯುವಕ!

Ramyashree GN

ಖಮ್ಮಂ: ಪೊಲೀಸರ ಕ್ರಮ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಬುಡಕಟ್ಟು ಯುವಕನೊಬ್ಬ ತರಾತುರಿಯಲ್ಲಿ ಏಕಕಾಲದಲ್ಲಿ ಇಬ್ಬರು ಮಹಿಳೆಯರೊಂದಿಗೆ ವಿವಾಹವಾಗಿರುವ ಘಟನೆ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಮೂಲಗಳ ಪ್ರಕಾರ, ಮಾದವಿ ಸತ್ತಿಬಾಬು (25) ಎಂಬ ಯುವಕ ಎರಡು ವರ್ಷಗಳ ಹಿಂದೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸ್ವಪ್ನಕುಮಾರಿ ಎಂಬಾಕೆಯನ್ನು ಪ್ರೀತಿಸುತ್ತಿದ್ದನು. ಕಾಲಾನಂತರದಲ್ಲಿ, ಅವರು ಮಗುವನ್ನು ಹೊಂದಿದ್ದರು. ಆದರೆ, ವೈಯಕ್ತಿಕ ಕಾರಣಗಳಿಂದ ಮದುವೆಯಾಗದಿರಲು ನಿರ್ಧರಿಸಿದರು ಮತ್ತು ಅಂತಿಮವಾಗಿ ಅವರು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.

ಈ ನಡುವೆ ಸತ್ತಿಬಾಬು ಕುರ್ನವಳ್ಳಿ ಗ್ರಾಮದ ಸುನೀತಾ ಎಂಬ ಮತ್ತೋರ್ವ ಮಹಿಳೆಯನ್ನು ಪ್ರೀತಿಸಿ ಒಟ್ಟಿಗೆ ಜೀವನ ನಡೆಸಲಾರಂಭಿಸಿದ್ದ. ನಂತರ ಸುನಿತಾ ಮಗುವಿಗೆ ಜನ್ಮ ನೀಡಿದ್ದು, ಸದ್ಯ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. ಸತ್ತಿಬಾಬು ಸುನೀತಾಳೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಸ್ವಪ್ನಾಗೆ  ತಿಳಿದಾಗ, ಆಕೆಯು ಅದೇ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ನಂತರ ಅವರ ಪೋಷಕರು ಅದನ್ನು ಒಪ್ಪಿ ಮೂವರು ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ.

ಗುರುವಾರ ಬೆಳಗ್ಗೆ ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಮದುವೆ ಆಮಂತ್ರಣ ಪತ್ರಿಕೆ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದು, ಮೂವರೂ ಮಧ್ಯರಾತ್ರಿ ತಮ್ಮ ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪರಸ್ಪರ ಮದುವೆಯಾಗಿದ್ದಾರೆ. 

SCROLL FOR NEXT