ದೇಶ

ಒಡಿಶಾ: ಜನವರಿ, ಫೆಬ್ರವರಿ ತಿಂಗಳಲ್ಲಿ 59 ಹೆಚ್3ಎನ್2 ಇನ್ಫ್ಲುಯೆನ್ಸ ಪ್ರಕರಣಗಳು ಪತ್ತೆ

Srinivas Rao BV

ಭುವನೇಶ್ವರ್: ಒಡಿಶಾದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಒಟ್ಟು 59 ಹೆಚ್3 ಎನ್ 2 ಇನ್ಫ್ಲುಯೆನ್ಸ ಪ್ರಕರಣಗಳು ವರದಿಯಾಗಿದೆ 

225 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಈ ಪೈಕಿ 59 ಪ್ರಕರಣಗಳು ದೃಢಪಟ್ಟಿದೆ. 

ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನೆ ಕೇಂದ್ರದ ನಿರ್ದೇಶಕ ಡಾ. ಸಂಗಮಿತ್ರ ಪಾಟಿ ಈ ಮಾಹಿತಿಯನ್ನು ದೃಢಪಡಿಸಿದ್ದು,  ಹೆಚ್3ಎನ್2 ಲಕ್ಷಣಗಳು ಜ್ವರ ಹಾಗೂ ಕೆಮ್ಮು ಸೇರಿದಂತೆ ಋತುಮಾನದ ಜ್ವರ ವೈರಸ್ಗಳ ಲಕ್ಷಣಗಳನ್ನೇ ಹೋಲುತ್ತದೆ ಎಂದು ಹೇಳಿದ್ದಾರೆ.
 
ರಾಜ್ಯದಲ್ಲಿ ಹೆಚ್3ಎನ್2 ವೈರಾಣುಗಳ ಪ್ರಕರಣದ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದಂದು ಒಡಿಶಾ ಆರೋಗ್ಯ ಕಾರ್ಯದರ್ಶಿ ಇನ್ಫ್ಲುಯೆನ್ಸ ತರಹದ ಅನಾರೋಗ್ಯ ಮತ್ತು ತೀವ್ರ ಉಸಿರಾಟದ ಸೋಂಕುಗಳ ಬಗ್ಗೆ ಆರೋಗ್ಯ ಸೌಲಭ್ಯ ಮಟ್ಟದಲ್ಲಿ ಮತ್ತು ಸಮುದಾಯ ಮಟ್ಟದಲ್ಲಿ ನಿಗಾ ವಹಿಸುವಂತೆ ಸೂಚಿಸಿದ್ದಾರೆ ಎಂದು ಆರೋಗ್ಯ  ಇಲಾಖೆ ಹೇಳಿದೆ.

SCROLL FOR NEXT