ದೇಶ

ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ, ಅಸಭ್ಯ ವರ್ತನೆ: ಅಮೇರಿಕಾ ಪ್ರಜೆ ವಿರುದ್ಧ ಪ್ರಕರಣ 

Srinivas Rao BV

tಲಂಡನ್- ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಮೇರಿಕಾ ಪ್ರಜೆಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ನೀಡಿದ್ದು, 37 ವರ್ಷದ ರಮಾಕಾಂತ್ ವಿರುದ್ಧ ಮುಂಬೈ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.11 ರಂದು ಚಲಿಸುತ್ತಿದ್ದ ವಿಮಾನದಲ್ಲಿ ಈ ವ್ಯಕ್ತಿ,  ತನ್ನ ಸಹ ಪ್ರಯಾಣಿರೊಂದಿಗೆ ಅನುಚಿತವಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 336 (ಮಾನವನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದ್ದು) ಮತ್ತು ಏರ್‌ಕ್ರಾಫ್ಟ್ ಆಕ್ಟ್ 1937, 22 (ಪೈಲಟ್-ಇನ್-ಕಮಾಂಡ್ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಿದ್ದು), ಸೆಕ್ಷನ್ 23 ರ ಪ್ರಕಾರ (ಆಕ್ರಮಣ ಮತ್ತು ಇತರ ಕ್ರಿಯೆಗಳು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ ಅಥವಾ ಉತ್ತಮ ಕ್ರಮ ಮತ್ತು ಶಿಸ್ತಿಗೆ ಅಪಾಯವನ್ನುಂಟುಮಾಡುತ್ತವೆ) ಮತ್ತು ಧೂಮಪಾನ ಮಾಡಿದ್ದಕ್ಕಾಗಿ ಸೆಕ್ಷನ್ 25 ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ವಿಮಾನದಲ್ಲಿ ಪ್ರಯಾಣಿಸುವ ವೇಳೆ ಧೂಮಪಾನಕ್ಕೆ ಅವಾಶವಿಲ್ಲ.  ಆದರೆ ಈ ವ್ಯಕ್ತಿ ಬಾತ್ ರೂಮ್ ಗೆ ಹೋಗಿ ಅಲ್ಲಿ ಧೂಮಪಾನ ಮಾಡಿದ್ದರು. ಬಾತ್ ರೂಮ್ ಕಡೆಗೆ ಓಡಿದ ವ್ಯಕ್ತಿಯ ಕೈಯಲ್ಲಿ ಸಿಗರೇಟ್ ಇದ್ದದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ ಹಾಗೂ ಅದನ್ನು ಕಸಿದು ಎಸೆದಿದ್ದಾರೆ. ಈ ಬೆನ್ನಲ್ಲೇ ರಮಾನಂತ್ ಸಿಬ್ಬಂದಿ ವಿರುದ್ಧ ಏರು ಧ್ವನಿಯಲ್ಲಿ ಗಲಾಟೆ ಮಾಡಿದ್ದಾನೆ. ಈತನ ವರ್ತನೆಗೆ ಹೆದರಿ ಉಳಿತ ಎಲ್ಲಾ ಸಿಬ್ಬಂದಿಗಳೂ ಆತಂಕಗೊಂಡಿದ್ದರು. ಕೊನೆಗೆ ಆತನನ್ನು ಹಗ್ಗ ಸಹಾಯದಿಂದ ಕಟ್ಟಿ ಹಾಕಿ ಸೀಟ್ ಮೇಲೆ ಕೂರಿಸಿದೆವು ಎಂದು ಏರ್ ಇಂಡಿಯಾ ಸಿಬ್ಬಂದಿಯೊಬ್ಬರು ಸಹರ್ ಪೊಲೀಸ್ ಠಾಣಗೆ ಮಾಹಿತಿ ನೀಡಿದ್ದಾರೆ. 

SCROLL FOR NEXT