ದೇಶ

ಅರುಣಾಚಲ ಹುಲಿ ಸಂರಕ್ಷಿತ ಅರಣ್ಯದೊಳಗೆ ಮರ ಕಳ್ಳಸಾಗಣೆದಾರರಿಂದ ರಸ್ತೆ ನಿರ್ಮಾಣ!

Lingaraj Badiger

ಗುವಾಹಟಿ: 2023ರ ಮೊದಲ ಎರಡು ತಿಂಗಳಲ್ಲಿ 30 ಹುಲಿಗಳು ಸಾವನ್ನಪ್ಪಿದ ನಂತರ ಭಾರತ ಹುಲಿ ಸಂರಕ್ಷಣೆಯತ್ತ ಗಮನಹರಿಸುತ್ತಿರುವಾಗಲೇ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರ ಕಳ್ಳಸಾಗಣೆದಾರರು ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ.

ಅರುಣಾಚಲ ಪ್ರದೇಶದ ಭಾರತದ ಪೂರ್ವದ ಚಾಂಗ್ಲಾಂಗ್ ಜಿಲ್ಲೆಯ ಅಧಿಕಾರಿಗಳು ಮಂಗಳವಾರ ನಾಮದಾಫಾ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೋರ್ ಪ್ರದೇಶದಲ್ಲಿ ಮತ್ತು ಅದರ ಸುತ್ತಲೂ ಕಚ್ಚಾ ರಸ್ತೆ ನಿರ್ಮಿಸುವಲ್ಲಿ ಮರ ಕಳ್ಳಸಾಗಾಣಿಕೆದಾರರು ಯಶಸ್ವಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.

ಇದು ಸರಿಸುಮಾರು 20 ಕಿಮೀ ರಸ್ತೆಯಾಗಿದ್ದು, ಅದರಲ್ಲಿ ಮಿನಿ ಟ್ರಕ್‌ಗಳು ಮಾತ್ರ ಸಂಚರಿಸಬಹುದಾಗಿದೆ. ಈ ರಸ್ತೆ 1-2 ಕಿಮೀ ರಾಷ್ಟ್ರೀಯ ಉದ್ಯಾನವನದೊಳಗೆ ಇದ್ದು, ಉಳಿದ ರಸ್ತೆ ಅದರ ಬಫರ್ ವಲಯದಲ್ಲಿದೆ. ಆಡಳಿತ ಮತ್ತು ಅರಣ್ಯ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇದು ಪತ್ತೆಯಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಸನ್ನಿ ಕೆ ಸಿಂಗ್ ನೇತೃತ್ವದ ತಂಡ, ದೊಡ್ಡ ಪ್ರಮಾಣದ ಮರ ಕಳ್ಳಸಾಗಣೆಯನ್ನೂ ಪತ್ತೆ ಮಾಡಿದೆ.

"ಇದು ಕಷ್ಟಕರವಾದ ಕಾರ್ಯಾಚರಣೆಯಾಗಿತ್ತು ಮತ್ತು ಕಳ್ಳಸಾಗಣೆದಾರರು ನಾವು ತೆರಳುವ ದಾರಿಯನ್ನು ದೊಡ್ಡ ಮರದ ದಿಮ್ಮಿಗಳಿಂದ ಬಂದ್ ಮಾಡಿದ್ದರಿಂದ ಅಲ್ಲಿಗೆ ತೆರಳಲು ಇನ್ನಷ್ಟು ಕಷ್ಟಕವಾಯಿತು. ಆದಾಗ್ಯೂ, ತಂಡದ ಸದಸ್ಯರ ಕಠಿಣ ಶ್ರಮದಿಂದ ಹಾದಿಯನ್ನು ತೆರವುಗೊಳಿಸಲಾಗಿದೆ ”ಎಂದು ಸನ್ನಿ ಕೆ ಸಿಂಗ್ ಗುರುವಾರ ತಿಳಿಸಿದ್ದಾರೆ.

SCROLL FOR NEXT