ಸಾಂದರ್ಭಿಕ ಚಿತ್ರ 
ದೇಶ

ಮದ್ಯ ನಿಷೇಧದದ ಹೊರತಾಗಿಯೂ ಗುಜರಾತ್‌ನಲ್ಲಿ 6,413 ಕೋಟಿ ರೂಪಾಯಿ ಮೌಲ್ಯದ ಮದ್ಯ ಮತ್ತು ಡ್ರಗ್ಸ್ ವಶ

ಮದ್ಯ ನಿಷೇಧದದ ಹೊರತಾಗಿಯೂ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 6,413 ಕೋಟಿ ರೂಪಾಯಿ ಮೌಲ್ಯದ ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.

ಅಹಮದಾಬಾದ್: ಮದ್ಯ ನಿಷೇಧದದ ಹೊರತಾಗಿಯೂ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ 6,413 ಕೋಟಿ ರೂಪಾಯಿ ಮೌಲ್ಯದ ಮದ್ಯ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.

ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ದೇಶೀ ನಿರ್ಮಿತ ವಿದೇಶಿ ಮದ್ಯ (ಐಎಂಎಫ್‌ಎಲ್) 197.56 ಕೋಟಿ ರೂ., ದೇಶೀ ನಿರ್ಮಿತ ಮದ್ಯ 3.99 ಕೋಟಿ ರೂ. ಮತ್ತು ಬಿಯರ್ ಬಾಟಲಿಗಳು 10.51 ಕೋಟಿ ರೂ. ಆಗಿದೆ. 

ಕಾಂಗ್ರೆಸ್ ಶಾಸಕರ ಸರಣಿ ಪ್ರಶ್ನೆಗಳಿಗೆ ಸರ್ಕಾರ ನೀಡಿದ ಉತ್ತರದಲ್ಲಿ ಈ ಅಂಕಿ ಅಂಶಗಳು ಬಂದಿವೆ. 2022ರ ಡಿಸೆಂಬರ್‌ನಿಂದ ಎರಡು ವರ್ಷಗಳಲ್ಲಿ ಪೊಲೀಸರು 212 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ ಎಂದು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

'ಇದೇ ಅವಧಿಯಲ್ಲಿ ಅಧಿಕಾರಿಗಳು ರಾಜ್ಯದ ವಿವಿಧ ಭಾಗಗಳಿಂದ ₹ 6,201 ಕೋಟಿ ಮೌಲ್ಯದ ಅಕ್ರಮ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಹೆರಾಯಿನ್, ಚರಸ್, ಅಫೀಮು, ಗಾಂಜಾ ಮತ್ತು ಮೆಥಾಂಫೆಟಮೈನ್ ಸೇರಿವೆ. ಅಕ್ರಮ ದಂಧೆಯಲ್ಲಿ ತೊಡಗಿರುವ ಹೆಚ್ಚಿನ ಕ್ರಿಮಿನಲ್‌ಗಳನ್ನು ಬಂಧಿಸಲಾಗಿದ್ದು, ಸುಮಾರು 3,700 ಶಂಕಿತರು ತಲೆಮರೆಸಿಕೊಂಡಿದ್ದಾರೆ' ಎಂದು ಸಾಂಘವಿ ಹೇಳಿದರು.

ಹಿರಿಯ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮಾರ್ ಅವರು ಬಂಧಿತರಾಗಿರುವ ಪ್ರಮುಖ ಶಂಕಿತರ ಸಂಖ್ಯೆಯ ಬಗ್ಗೆ ಸಚಿವರನ್ನು ಪ್ರಶ್ನಿಸಿದರು. ಬಂಧಿತರಲ್ಲಿ ಹೆಚ್ಚಿನವರು ಸಣ್ಣ ಅಪರಾಧಿಗಳಾಗಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಸಂಘವಿ, ರಾಜ್ಯ ಪೊಲೀಸರು ಫೆಡರಲ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮಾದಕವಸ್ತು ವಶಪಡಿಸಿಕೊಂಡ 14 ಘಟನೆಗಳಲ್ಲಿ ಪ್ರಾಥಮಿಕ ಶಂಕಿತರನ್ನು ಬಂಧಿಸಿದ್ದಾರೆ. ಅಂತಹ ಒಂದು ನಿದರ್ಶನದಲ್ಲಿ, ಪಾಂಡಿ ಸಹೋದರರು ತಮ್ಮ ಒಡಿಶಾದಿಂದ ಗುಜರಾತ್‌ಗೆ ಅಪಾರ ಪ್ರಮಾಣದ ಗಾಂಜಾ ಕಳ್ಳಸಾಗಣೆ ಮಾಡಿದ ಆರೋಪ ಹೊರಿಸಲಾಗಿದೆ ಎಂದರು.

ಡ್ರಗ್ಸ್ ಡೀಲರ್‌ಗಳ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಸಚಿವರು ಹೇಳಿದರು. 2022ರ ಜುಲೈ 25ರಂದು, ದೇಶೀ ನಿರ್ಮಿತ ಮದ್ಯ ಸೇವಿಸಿದ ನಂತರ ಕನಿಷ್ಠ 42 ಜನರು ಮೃತಪಟ್ಟರು ಮತ್ತು 97ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಲ್ಲಿ ಸಾವಿಗೀಡಾದರು ಎಂದರು.

1960ರಲ್ಲಿ ಗುಜರಾತ್ ಸ್ಥಾಪನೆಯಾದಾಗಿನಿಂದ, ರಾಜ್ಯದಲ್ಲಿ ಮದ್ಯವನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದು ಕಾನೂನುಬಾಹಿರವಾಗಿದೆ. ವಿಧಾನಸಭೆಯಲ್ಲಿ ಸರ್ಕಾರ ನೀಡಿರುವ ಉತ್ತರದ ಪ್ರಕಾರ, ವಡೋದರಾ (ರೂ. 1,620.7 ಕೋಟಿ), ಭರೂಚ್ (ರೂ. 1,389.91 ಕೋಟಿ), ಮತ್ತು ಕಚ್ (ರೂ. 1,040.57 ಕೋಟಿಗಳು) ಅತಿ ಹೆಚ್ಚು ಮಾದಕ ದ್ರವ್ಯ ಮತ್ತು ಮದ್ಯ ಸಾಗಣೆ ಹೊಂದಿರುವ ಜಿಲ್ಲೆಗಳಾಗಿವೆ.

ಐಎಂಎಫ್ಎಲ್ ವಶಪಡಿಸಿಕೊಂಡಿರುವ ವಿಚಾರದಲ್ಲಿ ಅಹಮದಾಬಾದ್ ಜಿಲ್ಲೆ 28.23 ಕೋಟಿ ಮೌಲ್ಯದ ಮದ್ಯದೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೆಯದು ಸೂರತ್ (ರೂ. 21.42 ಕೋಟಿ), ವಡೋದರಾ (ರೂ. 14.61 ಕೋಟಿ) ಮತ್ತು ರಾಜ್‌ಕೋಟ್ (ರೂ. 13.84 ಕೋಟಿ) ನಂತರದ ಸ್ಥಾನಗಳಲ್ಲಿವೆ. ವಶಪಡಿಸಿಕೊಂಡ ಮಾದಕ ದ್ರವ್ಯಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ 11 ಪಟ್ಟು ಹೆಚ್ಚಾಗಿದೆ.

'ಕಳೆದ ಎರಡು ವರ್ಷಗಳಲ್ಲಿ 6,201 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ, ಮಾದಕವಸ್ತು ಸಂಬಂಧಿತ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳದ ಹೊರತಾಗಿಯೂ, ಅಂತಹ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವು ಶೇ 1 ಕ್ಕೆ ಇಳಿದಿದೆ ಎಂದು ಕಥವಾಡಿಯಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

36 ಗಂಟೆಗಳಲ್ಲಿ 80 ಡ್ರೋನ್‌: ಪಾಕ್‌ನ ನೂರ್ ಖಾನ್ ವಾಯುನೆಲೆ ನಾಶ: Operation Sindoor ಒಪ್ಪಿಕೊಂಡ Pak

ಮೇಘಾಲಯ ಮೂಲಕ ಉಸ್ಮಾನ್ ಹಾದಿ ಕೊಲೆಯ ಪ್ರಮುಖ ಹಂತಕರು ಭಾರತಕ್ಕೆ ಪಲಾಯನ: ಬಾಂಗ್ಲಾ ಪೊಲೀಸರು

ಅಯೋಧ್ಯೆ ರಾಮಮಂದಿರಕ್ಕೆ ಚಂದ್ರಬಾಬು ನಾಯ್ಡು ಭೇಟಿ, ದಕ್ಷಿಣ ಭಾರತದ ಮೊದಲ ಸಿಎಂ!

'ಜನ ನಾಯಗನ್' ನನ್ನ ಕೊನೆಯ ಸಿನಿಮಾ: ಮುಂದಿನ 30 ವರ್ಷ ನಿಮ್ಮ ಋಣ ತೀರಿಸಲು ದುಡಿಯುತ್ತೇನೆ - ನಟ ವಿಜಯ್

ಕಾಂಗ್ರೆಸ್ ಒಂದು ಸಿದ್ಧಾಂತ, ಸಿದ್ಧಾಂತಗಳು ಎಂದಿಗೂ ಸಾಯಲ್ಲ: 140ನೇ ಸಂಸ್ಥಾಪನಾ ದಿನದಂದು ಮಲ್ಲಿಕಾರ್ಜುನ ಖರ್ಗೆ

SCROLL FOR NEXT