ದೇಶ

ಕೇರಳ: ಕುಡಿಯುವ ನೀರಿಗಾಗಿ ಬಾವಿ ತೋಡಲು ಸ್ನೇಹಿತೆಗೆ ಸಹಾಯ ಮಾಡಿದ 7 ಮಹಿಳೆಯರು!

ಪ್ರತಿ ಬೇಸಿಗೆಯಲ್ಲೂ ಜೆಸ್ಸಿ ಸಾಬು ಮತ್ತು ಅವರ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಪತಿ ಸಾಬು ಮತ್ತು ಮೂವರು ಮಕ್ಕಳೊಂದಿಗೆ ಕೇರಳದ ಪತ್ತನಂತಿಟ್ಟದ ನಾರಣಮ್ಮೂಜಿಯಲ್ಲಿ ವಾಸಿಸುವ 45 ವರ್ಷದ ಜೆಸ್ಸಿ ಅವರು ಬೇಸಿಗೆಯಲ್ಲಿ ತೀವ್ರ...

ಪತ್ತನಂತಿಟ್ಟ: ಪ್ರತಿ ಬೇಸಿಗೆಯಲ್ಲೂ ಜೆಸ್ಸಿ ಸಾಬು ಮತ್ತು ಅವರ ಕುಟುಂಬಕ್ಕೆ ಅಗ್ನಿ ಪರೀಕ್ಷೆ. ಪತಿ ಸಾಬು ಮತ್ತು ಮೂವರು ಮಕ್ಕಳೊಂದಿಗೆ ಕೇರಳದ ಪತ್ತನಂತಿಟ್ಟದ ನಾರಣಮ್ಮೂಜಿಯಲ್ಲಿ ವಾಸಿಸುವ 45 ವರ್ಷದ ಜೆಸ್ಸಿ ಅವರು ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು.

ಆದರೆ, ಈ ಬಾರಿ ಅವರು ತುಂಬಾ ನಿರಾಳವಾಗಿದ್ದಾರೆ. ತನ್ನ ಮನೆಯ ಆವರಣದಲ್ಲಿಯೇ ಕುಡಿಯುವ ನೀರಿಗಾಗಿ ಬಾವಿ ತೋಡಲು ಸಹಾಯ ಮಾಡಿದ ಏಳು ಮಹಿಳೆಯರಿಗೆ ಧನ್ಯವಾದ ಹೇಳಿದ್ದಾರೆ.

ಪ್ರತಿ ವರ್ಷ ನೀರಿನ ಕೊರತೆ ಎದುರಿಸುತ್ತಿದ್ದರೂ, ಈ ಬಾರಿ ತಾಪಮಾನದ ತೀವ್ರ ಏರಿಕೆಯು ನಾರಣಮ್ಮೂಜಿ ಪಂಚಾಯಿತಿಯ ವಾರ್ಡ್ 2 ರಲ್ಲಿ ವಾಸಿಸುವ ಈ ಕುಟುಂಬವನ್ನು ಮತ್ತಷ್ಟು ಕಂಗೇಡಿಸಿತು. 2,000 ಲೀಟರ್ ನೀರಿಗೆ ಖಾಸಗಿ ಟ್ಯಾಂಕರ್‌ಗಳಿಗೆ 1,000 ರೂ. ಪಾವತಿಸಬೇಕಾಗಿತ್ತು. ಈ ನೀರು ಕೇವಲ ಒಂದು ವಾರಕ್ಕೆ ಸಾಕಾಗುತ್ತಿತ್ತು. ಪ್ರತಿ ಬೇಸಿಗೆಯಲ್ಲಿ ಬಟ್ಟೆ ಒಗೆಯಲು ಸುಮಾರು 7 ಕಿ.ಮೀ ದೂರದ ಪಂಪಾ ನದಿಗೆ ಹೋಗಲು ಜೆಸ್ಸಿ ಅವರು 400 ರೂ. ಆಟೋರಿಕ್ಷಾ ಬಾಡಿ ನೀಡುತ್ತಿದ್ದಾರೆ.

ವರ್ಷವಿಡೀ ಕುಡಿಯುವ ನೀರಿಗಾಗಿ ಈ ಕುಟುಂಬ ಟ್ಯಾಂಕರ್ ಲಾರಿಗಳ ಮೇಲೆ ಅವಲಂಬಿತವಾಗಿದ್ದರೂ, ಬೇಸಿಗೆಯಲ್ಲಿ ಬೆಲೆ ತೀವ್ರವಾಗಿ ಹೆಚ್ಚಾಗುತ್ತದೆ.

ಒಂದು ಬಾವಿ ತೋಡಿದರೆ ತಮ್ಮ ನೀರಿನ ಸಮಸ್ಯೆ ಪರಿಹಾರವಾಗಬಹುದಾದರೂ, ಬಾವಿ ತೋಡುವ ಕಾರ್ಮಿಕರಿಗೆ ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ತಾವೇ ಬಾವಿ ತೋಡಲು ನಿರ್ಧರಿಸಿ ಮಾ.2ರಂದು ಕಾಮಗಾರಿ ಆರಂಭಿಸಿದ್ದರು. 

ತಮ್ಮ ಸ್ನೇಹಿತೆಯ ಕಷ್ಟವನ್ನು ಮನಗಂಡ ಮಹಿಳೆಯರು, ಮರಿಯಮ್ಮ ಥಾಮಸ್(52), ಲೀಲಮ್ಮ ಜೋಸ್(50), ಉಷಾಕುಮಾರಿ (51), ಲಿಲ್ಲಿ ಕೆಕೆ(51), ಕೊಚುಮೋಲ್(49), ರೆಜಿಮೋಲ್(42), ಮತ್ತು ಅನು ಥಾಮಸ್(34) ಅವರು ಜೆಸ್ಸಿ ಸಹಾಯ ಮಾಡಲು ಮತ್ತು ಉಚಿತವಾಗಿ ಕೆಲಸ ಮಾಡಲು ನಿರ್ಧರಿಸಿದರು.

“ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಅಂತ ನನಗೆ ಅರ್ಥವಾಗುತ್ತಿಲ್ಲ. ಸೋಮವಾರದವರೆಗೆ 4 ಮೀಟರ್ ವರೆಗೆ ಅಗೆದು ಸ್ವಲ್ಪ ನೀರು ನೋಡಿದೆವು. ನಾವು ಸುಮಾರು 7 ಮೀಟರ್ ಆಳಕ್ಕೆ ಹೋದರೆ ನೀರು ಸಿಗುತ್ತದೆ ಎಂದು ಭಾವಿಸಿದ್ದೇವೆ. ಬಂಡೆಗಳಿಂದ ಕೂಡಿದ ಭೂಮಿ ಕೊರೆಯುವುದು ಸವಾಲಾಗಿತ್ತು. ಆದಾಗ್ಯೂ,  ನೀರು ಬರುವವರೆಗೆ ಬಿಡುವುದು ಬೇಡ ಎಂದು ನಾವು ನಿರ್ಧರಿಸಿದ್ದೇವೆ” ಎಂದು ಜೆಸ್ಸಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT