ದೇಶ

ಭಾರತೀಯ ವಸ್ತುಸಂಗ್ರಹಾಲಯಗಳು, ಸಂಸ್ಕೃತಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

Srinivas Rao BV

ನವದೆಹಲಿ: ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಮಟ್ಟದ ವಸ್ತುಸಂಗ್ರಹಾಲಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. 

ಗ್ರೂಪ್ ಎ, ಗ್ರೂಪ್ ಬಿ ಅಧಿಕಾರಿಗಳು ಸೇರಿದಂತೆ ಒಟ್ಟು ಶೇ.38 ರಷ್ಟು ಸಿಬ್ಬಂದಿ ಕೊರತೆಯೊಂದಿಗೆ ಈ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಸಂಸ್ಥೆಗಳಲ್ಲಿ ಗ್ರೂಪ್ ಎ ಹುದ್ದೆಗಳಲ್ಲಿ ಶೇ.35 ರಷ್ಟು ಖಾಲಿ ಇದೆ ಎಂಬ ಮಾಹಿತಿ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಸ್ಥಾಯಿ ಸಮಿತಿಯ 'ಸಂಸ್ಕೃತಿ ಸಚಿವಾಲಯದ ಅನುದಾನಕ್ಕಾಗಿ ಬೇಡಿಕೆಗಳ (2023-24)' ವರದಿಯ ಮೂಲಕ ತಿಳಿದುಬಂದಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯಲ್ಲಿ 9,262 ಹುದ್ದೆಗಳು ಇದ್ದು, ಈ ಪೈಕಿ 3,449 ಹುದ್ದೆಗಳು ಖಾಲಿ ಇವೆ.  ಹುದ್ದೆಗಳನ್ನು ಭರ್ತಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಎಸ್ಐ ಹೇಳಿದೆ. 

ಅಧಿಕಾರಿಗಳ ಪ್ರಕಾರ, ಎಎಸ್ಐ ಯುಪಿಎಸ್ ಸಿ ಹಾಗೂ ಸಿಬ್ಬಂದಿ ಆಯ್ಕೆ ಆಯೋಗ (SSC) ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಮನವಿ ಸಲ್ಲಿಸಿದೆ. ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಲ್ಲಿ ವಿವಿಧ ಹಂತಗಳಲ್ಲಿ ಸಂಪೂರ್ಣ ಸಮಯದ ಸದಸ್ಯರ 5 ಹುದ್ದೆಗಳು ಇನ್ನೂ ಭರ್ತಿಯಾಗಬೇಕಿದೆ. 

SCROLL FOR NEXT